ಸುರಪುರ: ವೀರಶೈವ ಲಿಂಗಾಯತ ಸಮುದಾಯದ ಅಭಿವೃಧ್ಧಿಗೆ ಮಹಿಳೆಯರು ಕೂಡ ಸಹಕಾರ ನೀಡಬೇಕಾಗಿದೆ.ಅದಕ್ಕಾಗಿ ಇಂದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮೂಲಕ ನಾವೆಲ್ಲ ಸಂಘಟಿತರಾಗಿ ವೀರಶೈವ ಲಿಂಗಾಯತ ಮಹಿಳಾ ಸಂಘಟನೆ ರಚನೆ ಮಾಡಬೇಕಾಗಿದ್ದು ಇಂದು ಅವಶ್ಯಕವಾಗಿದೆ ಎಂದು ನ್ಯಾಯವಾದಿ ಜಯಲಲಿತಾ ಪಾಟೀಲ ಮಾತನಾಡಿದರು.
ನಗರದ ನಿಷ್ಠಿ ಕಡ್ಲೆಪ್ಪನವರ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗು ವೀರಶೈವ ಲಿಂಗಾಯತ ಮಹಿಳಾ ಸಂಘಟನೆ ರಚನೆಗಾಗಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ನಾವೆಲ್ಲರು ಸಂಘಟಿತರಾಗಿ ಒಮದು ಸಹಕಾರ ಸಂಘವನ್ನು ರಚನೆ ಮಾಡಿಕೊಂಡು ನಮ್ಮ ಸಮುದಾಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಬೆಂಬಲ ನಿಡೋಣ.ಸಹಕಾರ ಸಂಘ ರಚನೆಯಾದರೆ ಅನೇಕ ಕುಟುಂಬಗಳಿಗೆ ಆಧಾರವಾಗಲಿದೆ,ಮಹಿಳೆಯರು ಆರ್ಥಿಕವಾಗಿ ಮೇಲೆ ಬಂದರೆ ಅದರಿಂದ ಕುಟುಂಬ ನಿರ್ವಹಣೆಗು ಸಹಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಶಹಾಪುರದ ಉಪನ್ಯಾಸಕಿ ಶಂಕ್ರಮ್ಮ ಪಾಟೀಲ ಮಾತನಾಡಿ,ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಾವೆಲ್ಲರು ಸೇರಿದ್ದೇವೆ.ನಾವೆಲ್ಲರು ಮಹಿಳೆಯರು ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಚಿಂತನೆ ಮಾಡಬೇಕಾಗಿದೆ.ನೀವೆಲ್ಲರು ಸಂಘಟಿತರಾಗಿ ಉತ್ತಮವಾದ ಸಂಘಟನೆಯನ್ನು ನಿರ್ಮಾಣ ಮಾಡುವ ಮೂಲಕ ನಮ್ಮ ಸಮಾಜದ ಅಭೀವೃಧ್ಧಿಗೆ ಸಹಕಾರ ನಿಡೋಣ.ಇಂದು ಮಹಿಳೆ ನಿತ್ಯವು ಹಲವಾರು ಸಮಸ್ಯೆಗಳನ್ನು ಹೆದರಿಸುವಂತಾಗಿದೆ.ಅಂತಹ ಸಮಸ್ಯೆಗಳ ವಿರುಧ್ಧ ನಾವೆಲ್ಲರು ಧ್ವನಿ ಎತ್ತಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ಯಾನಗುಂದಿ ಮಾತಾ ಮಾಣಿಕೇಶ್ವರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು.ಶಾರದಾ ಎಂ.ಜಾಲಹಳ್ಳಿ,ದಾನಮ್ಮ ಕಡ್ಲೆಪ್ಪನವರ ಮಠ,ಆರತಿ ಕಡ್ಲೆಪ್ಪನವರ ಮಠ,ಶಿಲ್ಪಾ ಆವಂಟಿ,ಶ್ವೇತಾ ಗುಳಗಿ, ಮಹಾದೇವಮ್ಮ ಹಳ್ಳದ,ಲಕ್ಷ್ಮೀ ಕಳ್ಳಿಮನಿ,ನೀಲಾಂಬಿಕಾ ಹೆಬ್ಬಾಳ,ರೇಣುಕಾ ಕಲಕೇರಿ,ಗುರುಬಸಮ್ಮ ಹೂಗಾರ,ಸರಸ್ವತಿ ಎಸ್.ಸ್ವಾಮಿ,ಸುವರ್ಣ ಗುಡಿಮಠ,ಭಾರತಿ ದೇಶಮುಖ,ಯಂಕಮ್ಮ ಹೂಗಾರ,ಗೀತಾ ಶಾಬಾದಿ,ಸುಮಂಗಲಾ ಪಂಚಾಂಗಮಠ,ಹಂಪಮ್ಮ ಬಾರಿ,ರಾಜೇಶ್ವರಿ ಹಳ್ಳದ,ಗಂಗಮ್ಮ ಜಮದ್ರಖಾನಿ,ಮಹಾದೇವಿ ಹಿರೇಮಠ ಸೇರಿದಂತೆ ಅನೇಕರಿದ್ದರು.ಪ್ರಿಯಾ ಲಕ್ಷ್ಮೀಪುರ ಸ್ವಾಗತಿಸಿದರು,ಸುಜಾತಾ ಹಳ್ಳದ ನಿರೂಪಿಸಿದರು,ಸಿದ್ದಮ್ಮ ವಂದಿಸಿದರು.