ಕಲಬುರಗಿ: ನಗರದ ವಿವಿಧ ಪ್ರಮುಖ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ 85 ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಇರಿಸಲಾಗಿದೆ ಎಂದು ಕಲಬುರಗಿ ಪೊಲೀಸ್ ಉಪ ಆಯುಕ್ತರಾದ ಕಿಶೋರ್ ಬಾಬಾ ಅವರು ತಿಳಿಸಿದ್ದಾರೆ.
ಆದರ್ಶ ನಗರ ಚೌಕ್, ಬಸವೇಶ್ವರ ಕಾಲೋನಿ ಚೌಕ್, ಬಾರೆ ಹೀಲ್ಸ್ ಚೌಕ್, ಸಂಗತ್ರಾಶ ವಾಡಿ, ಮುಸ್ಲಿಂ ಚೌಕ್, ಹಫ್ತ್ ಗುಂಬಜ್ ಕ್ರಾಸ್, ರಾಮಜೀ ನಗರ, ಹಾಗೂ ಬಿಬಿ ರಜಾ ಕಾಲೇಜ ಚೌಕ್ ಸೇರಿದಂತೆ ಮುಂತಾದ ಬಿದಿಗಳಲ್ಲಿ ಕ್ಯಾಮೆರಾಗಳು ಅಳವಡಿಸಿದ್ದಾರೆ.
ಸದ್ಯ ಕೆಲವು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮಪ್ರದೇಶಗಳಲ್ಲಿ 85 ಸಿಸಿ ಟಿವಿ ಕ್ಯಾಮೆರಾಗಳು ಅಳವಡಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಸಿ ಟಿವಿಗಳು ಅಳವಡಿಸುವ ಯೋಚನೆ ಇದೆ. – ಕಿಶೋರ್ ಬಾಬು, ಉಪ ಪೊಲೀಸ್ ಆಯುಕ್ತರು ಕಲಬುರಗಿ.
ಅಪರಾಧ ಪ್ರಕರಣ ಹಾಗೂ ಕೋಮು ಸೌಹಾರ್ದತೆ ಕದಡುವಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದ್ದು, ಸಾರ್ವಜನಿಕರ ಹಿತದೃಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಈ ಪ್ರಯತ್ನದಿಂದ ಕಲಬುರಗಿ ಜನರಿಂದ ಸಂತೋಷ ವ್ಯಾಕ್ತವಾಗಿದೆ. ಸಿಸಿ ಟವಿ ಅಳವಡಿಕೆಗೆ ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ.