ಕಲಬುರಗಿಯಲ್ಲಿ ವೃದ್ಧನಿಗೆ ವೈರಸ್?: ಅಲ್ಲಗಳೆದ ಜಿಮ್ಸ್ ಆಸ್ಪತ್ರೆ ವೈದ್ಯರು

0
1578

ಕಲಬುರಗಿ: ನಗರ ಜೆಮ್ಸ್ ಆಸ್ಪತ್ರೆಯಲ್ಲಿ ವೃದ್ದನೋರ್ವನಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿರುವ ಬಗ್ಗೆ ವರದಿಯಾಗುತಿದ್ದು, ಈ ಬಗ್ಗೆ ಜಿಮ್ಸ್ ಆಸ್ಪತ್ರೆಯ ವೈದ್ಯರು ವರದಿಯನ್ನು ವದಂತಿ ಎಂದು ಅಳಗಳೆದಿದ್ದಾರೆ. ಈಗಾಗಲೇ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಜೆಮ್ಸ್ ಆಸ್ಪತ್ರೆಯಲ್ಲಿ ಕರೋನಾ ವೈರಸ್ ಗೆ ಸಂಬಧಿಸಿದಂತೆ ರೋಗಿನು ಇಲ್ಲ, ಯಾವುದೇ ಶಂಕೆನ್ನು ವ್ಯಕ್ತವಾಗಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ಒಂದು ವರದಿಯನ್ನು ಇಟ್ಟುಕೊಂಡು ವದಂತಿ ಹರಡಿಸಲಾಗುತಿದೆ. ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡಿರುವ ಸುದ್ದಿ ಕೆವಲ ವದಂತಿ ಬಿಟ್ಟು ಬೇರೆ ಏನು ಇಲ್ಲ.   – ಡಾ. ಮೊಹಮ್ಮದ್ ಶಫೀವೋದ್ದಿನ್, ಜಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ, ಜಿಲ್ಲಾ ಮುಖ್ಯ ಕೊರೋನಾ ವೈರಸ್ ನಿರ್ವಾಹಕ ವೈದ್ಯರು.

Contact Your\'s Advertisement; 9902492681

ಸೌದಿ ಅರೇಬಿಯಾದಿಂದ ಬಂದಿದ್ದ ೭೫ ವರ್ಷದ ವೃದ್ದನಿಗೆ, ಫೆಬ್ರವರಿ 29 ರಂದು ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ದ, ಮಾರ್ಚ್ 5 ರಂದು ಜ್ವರ, ಕೆಮ್ಮು ವಿನ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಕೊರೊನಾ ಲಕ್ಷಣಗಳು ಕಂಡ ಹಿನ್ನೆಲೆಯಲ್ಲಿ  ವಿಶೇಷ ಚಿಕಿತ್ಸೆ, ಕುಟುಂಬಸ್ಥರನ್ನು ಕೂಡಾ ವೈದ್ಯರು ತಪಾಸಣೆ ಮಾಡಿರುವ, ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್ ಗೆ ಕಳಿಸಿ, ವರದಿಗಾಗಿ ಕಾಯುತ್ತಿರುವ ಜಿಲ್ಲಾ ಆರೋಗ್ಯ ಇಲಾಖೆ ವರದಿಗಾಗಿ ಕಾಯುತ್ತಿದ್ದು, ನಗರದ ಜಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ ನಲ್ಲಿರುವ ವಿಶೇಷ ವಾರ್ಡ್ ನಲ್ಲಿ ವೃದ್ದನಿಗೆ ಚಿಕಿತ್ಸೆ ನೀಡಲಾಗುತಿದೆ ಎಂದು ವರದಿಯಾಗಿದೆ.

ಈ ವರದಿಯನ್ನು ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಅಲ್ಲಗಳೆದು, ಜಿಲ್ಲೆಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಇ-ಮೀಡಿಯಾ ಲೈನ್ ಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here