ಸುರಪುರ: ನಗರದಾದ್ಯಂತ ಯುವಕರು ಹೋಳಿ ಹಬ್ಬದ ಅಂಗವಾಗಿ ಪರಸ್ಪರ ಬಣ್ಣ ಎರಚುತ್ತಾ ಸಂಭ್ರಮಿಸಿದರು.ಮಂಗಳವಾರ ಬೆಳಿಗ್ಗೆಯಿಂದ ಮದ್ಹ್ಯಾನದ ವರೆಗೆ ಹತ್ತಾರು ಯುವಕರು ಗುಂಪಾಗಿ ಸೇರಿ ತಮಟೆ ಬಾರಿಸುತ್ತಾ ಬಣ್ಣ ಎರಚುತ್ತಾ ಹೋಳಿಯನ್ನು ಆಚರಿಸಿದರು.
ದೇಶದಲ್ಲಿ ಕೊರೋನಾ ವಯರಸ್ ಭೀತಿಯಲ್ಲಿ ಹೋಳಿ ಆಚರಣೆ ಈಬಾರಿ ಮಂಕಾಗಿದ್ದರು ಸುರಪುರದಲ್ಲಿ ಅದ್ಯಾವದರ ಪರಿವೆ ಇಲ್ಲದಂತೆ ಯುವಕರು,ಯುವತಿಯರು,ಮಹಿಳೆಯರು ಎಲ್ಲರು ಬಣ್ಣ ಎರಚುತ್ತಾ ಕೇಕೆ ಹಾಕುತ್ತಾ ಹಬ್ಬ ಆಚರಿಸಿದರು.ಕೆಲವು ಯುವಕರು ತಮಟೆ ಬಾರಿಸುತ್ತಾ ಕಾಮಣ್ಣನ ಅಣಕು ಪಾತ್ರ ನಿರ್ಮಿಸಿ ತಲೆಗೆ ಬಾರಿಗೆ ಕಟ್ಟಿ ಹರಕು ಬಟ್ಟೆಯನ್ನು ಉಡಿಸಿ ಬೊಬ್ಬೆ ಹಾಕುತ್ತಾ ಬಣ್ಣ ಎರಚುತ್ತಾ ಹಬ್ಬ ಆಚರಿಸಿದರು.ಇನ್ನು ಕೆಲವರು ತಮಟೆ ಬಾರಿಸುತ್ತಾ ಸುರಪುರದ ವಿಶೇಷವಾದ ದುಮದುಮೆ ಹಾಡುಗಳನ್ನಾ ಆಡುತ್ತಾ ಸಂತೋಷಪಟ್ಟರು. ಮದ್ಹ್ಯಾನದವರೆಗೆ ಬಣ್ಣ ಆಡಿದ ಯುವಕರು ನಂತರ ಕೆರೆ ಬಾವಿಗಳಿಗೆ ತೆರಳಿ ಸ್ನಾನಕ್ಕೆ ತೆರಳಿ ಅಲ್ಲಿಯೆ ಊಟೋಪಚಾರವನ್ನು ಮಾಡಿ ಸಂಜೆಯ ವೇಳೆಗೆ ತಮ್ಮ ಮನೆಗಳಿಗೆ ತೆರಳಿದರು.
ಹೋಳಿ ಹಬ್ಬದ ಅಂಗವಾಗಿ ನಗರದಾದ್ಯಂತ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು,ಎಲ್ಲರು ಶಾಂತಿಯುತವಾಗಿ ಹೋಳಿ ಆಚರಣೆ ನಡೆಸಿದರು.ಎಲ್ಲಿಯೂ ಯಾವುದೆ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲಾಯಿತು.