ಕಲಬುರಗಿ: ಶಂಕಿತ ಕರೋನಾ ಸೋಂಕು ತಗುಲಿರುವ ವ್ಯಕ್ತಿಯ ಸಾವಿನ ಹಿನ್ನೆಲೆ, ಕಲಬುರಗಿಯಲ್ಲಿ ಕರೋನಾ ಸೋಂಕು ಪರೀಕ್ಷಾ ಕೇಂದ್ರ ತೆರೆಯುವಂತೆ ಸರಕಾರಕ್ಕೆ ಶಾಸಕರಾದ ಪ್ರಿಯಾಂಕ್ ಖರ್ಗೆ ಆಗ್ರಹ.
ಈ ಕುರಿತು ಮಾನ್ಯ ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ಅವರಿಗೆ ಪತ್ರ ಬರೆದಿರುವ ಶಾಸಕರು, ವ್ಯಕ್ತಿಯ ಸಾವಿನ ನಂತರ ಸಹಜವಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಹಾಗಾಗಿ, ಈ ಕೂಡಲೇ ಕಲಬುರಗಿಯಲ್ಲಿ ಕರೋನಾ ವೈರಸ್ ಪತ್ತೆ ಹಚ್ಚಲು ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಯವಂತೆ ಅವರು ಕೋರಿದ್ದಾರೆ.
ಪ್ರಸ್ತುತ, ಕರೋನ ವೈರಸ್ ಪತ್ತೆ ಮಾಡಲು ರಕ್ತದ ಮಾದರಿಯನ್ನು ಬೆಂಗಳೂರಿಗೆ ಕಳಿಸಬೇಕಾಗಿದ್ದು ಇದರಿಂದಾಗಿ ತುಂಬಾ ಕಾಲಾವಕಾಶ ಬೇಕಿದ್ದು ಚಿಕಿತ್ಸೆಗೆ ವಿಳಂಬವಾಗುವ ಸಾಧ್ಯತೆಯನ್ನು ಶಾಸಕರು ಒತ್ತಿ ಹೇಳಿ ವೈರಸ್ ಪತ್ತೆಗಾಗಿ ಪರೀಕ್ಷಾ ಕೇಂದ್ರ ತೆರೆಯಲು ಮನವಿ ಮಾಡಿದ್ದಾರೆ.