ಮಾ. 14 ರಂದು ರಾಯಣ್ಣ ಉತ್ಸವಕ್ಕೆ ಭರದ ಸಿದ್ಧತೆ ಆರಂಭ

0
34

ಆಳಂದ: ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಮಾ.14 ರಂದು ಬೆಳಗಿ 10 ಗಂಟೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘವು ಹಮ್ಮಿಕೊಂಡ ರಾಯಣ್ಣ ಉತ್ಸವ, ಸಮಾಜ ಸಂಘಟನೆಯ ಜಾಗೃತಿ ಬೃಹತ್ ಸಮಾವೇಶ ಹಾಗೂ ಭವ್ಯ ಮೆರವಣಿಗೆ, ಸಾಧಕರಿಗೆ ಸನ್ಮಾನ ಸಮಾರಂಭ ಜರುಗಲಿದೆ.

ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಯಣ್ಣ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಕಾಂತ ಘೋಡಕೆ ಅವರು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಮಾಜ ಸಂಘಟನೆಯ ಏಕೈಕ ಉದ್ದೇಶದಿಂದ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆ ಮತ್ತು ತಾಲೂಕಿನ ಕುರುಬ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಕನಕ ಗುರು ಪೀಠದ ಸಿದ್ಧರಾಮನಂದಪುರಿ ಮಹಾಸ್ವಾಮಿಗಳು ವಹಿಸುವರು. ಹುಲಜಂತಿಯ ಮಾಳಿಂಗರಾಯ ಮಹಾರಾಯರು ಸಾನ್ನಿಧ್ಯ ವಹಿಸಲಿದ್ದು, ಸಮಾಜ ಸೇವಕ ಜೆ.ಎಎಂ. ಕೋರಬು ಅವರು ಸಮಾರಂಭ ಉದ್ಘಾಟನೆ ಕೈಗೊಳ್ಳುವರು. ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ ಜೋತಿ ಬೆಳಗಿಸುವರು. ತಾಲೂಕು ಅಧ್ಯಕ್ಷ ತುಕಾರಾಮ ವಗ್ಗೆ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಆಗಮಿಸುವರು. ಉತ್ಸವ ಸಮಿತಿ ಅಧ್ಯಕ್ಷ ಚಂದ್ರಕಾಂತ ಘೋಡಕೆ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯ ದಿಲೀಪ ಆರ್. ಪಾಟೀಲ ಸೇರಿ ವಿವಿಧ ತಾಲೂಕುಗಳಿಂದ ಸಮಾಜ ಮುಖಂಡರು ಆಗಮಿಸುವರು ಎಂದರು.

ಸಾಹಿತಿ ಡಾ. ಚಂದ್ರಕಲಾ ಬೀದರಿ, ಬೆಂಗಳೂರಿನ ನಿಖೇತರಾಜ, ಸಮಾಜದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಿಲ್ಪಾ, ಉಪನ್ಯಾಸಕ ಬಾಬುರಾವ್ ಸರಡಗಿ ಅವರು ಪಾಲ್ಗೊಂಡು ಸಮಾಜ ಕುರಿತು ಮಾತನಾಡಲಿದ್ದಾರೆ ಎಂದರು.
ಸಮಾಜದ ರಾಜ್ಯ ನಿರ್ದೇಶಕ ಈರಣ್ಣಾ ಝಳಕಿ, ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಭಗವಂತರಾವ್ ಪಾಟೀಲ ಜೇವರ್ಗಿ, ಗಣಪತಿ ಮಿಣಜಗಿ ನಿರ್ಮಲಾ ಬರಗಾಲಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಅಲ್ಲದೆ, ಸಮಾಜದ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾಯಿತ ಸದಸ್ಯರು ಸಮಾಜ ಸೇವಕರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ತುಕಾರಾಮ ವಗ್ಗೆ, ಈರಣ್ಣಾ ಎಸ್. ಝಳಕಿ, ದೊಡ್ಡಪ್ಪ ಗೌಡೆ, ವೀರಣ್ಣಾ ಕವಲಗಾ, ಜಿ.ಕೆ. ಪೂಜಾರಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here