ಕೊರೋನಾ ತಡೆಗೆ ಕಲಬುರಗಿ ಮಹಾನಗರ ಪಾಲಿಕೆ ಸ್ವಚ್ಚತೆಗೆ ಒತ್ತು

0
73

ಕಲಬುರಗಿ: ಕೋರನಾ ವೈರಸ್ ಸಾರ್ವಜನಿಕರಲ್ಲಿ ಭೀತಿ ಮೂಡಿಸುತ್ತಿದೆ. ಆದ್ದರಿಂದ ಕಲಬುರಗಿ ನಗರದ ಮುಖ್ಯವಾದ ಸಾರ್ವಜನಿಕರ ಸಂಚಾರ ಮಾಡುವ ಸ್ಥಳಗಳಾದ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಎಸ್.ವಿ.ಪಿ ವೃತ್ತ, ಸೂಪರ್ ಮಾರ್ಕಟ, ಅಪ್ಪಾ ದೇವಸ್ಥಾನ, ಕೆ.ಬಿ.ಎನ್ ದರ್ಗಾ, ಹಾಗೂ ಜಗತ್ತ ವೃತ್ತದ ವಿವಿಧ ಸ್ಥಳಗಳಲ್ಲಿನ ಸ್ವಚ್ಚತೆಯ ಪ್ರಾಮುಖ್ಯತೆಯನ್ನು ಈಗಾಗಲೇ ಪರಿಗಣಿ ಸ್ವಚ್ಚತೆಗೆ ಇಡಿಯಾಗಿ ಒತ್ತು ನೀಡಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದುವರೆದು ಪಾಲಿಕೆಯ ಪೌರಕಾರ್ಮಿಕರಿಗೆ Bio Metric ಹಾಜರಾತಿಯನ್ನು ರದ್ದುಗೊಳಿಸಲಾಗಿದೆ ಹಾಗೂ  12/03/2020 ರಂದು ಕೋರನಾ ವೈರಸ್ ಬಗ್ಗೆ ಮಹಾಗನರ ಪಾಲಿಕೆಯ ಎಲ್ಲಾ ಪೌರಕಾರ್ಮಿಕರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಹಸಿ-ಕಸ ಮತ್ತು ಒಣ-ಕಸ ವಿಂಗಡಣೆ ಮಾಡಿ ಪಾಲಿಕೆಯ ವಾಹನಗಳಿಗೆ ಕೊಡಬೇಕಾಗಿ ವಿನಂತಿಸಲಾಗಿದೆ.

Contact Your\'s Advertisement; 9902492681

ಕಸವನ್ನು ರಸ್ತೆಗೆ ಚಲ್ಲದಿರುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಲು ಮನವಿ ಮಾಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here