ಕೊರೋನಾ ಸೋಂಕಿಗೆ ದೇಶದ ಮೊದಲ ಬಲಿ ಕಲಬುರಗಿಯ 76 ವರ್ಷದ ವ್ಯಕ್ತಿ

0
194

ಕಲಬುರಗಿ: ಮಾ. 10 ರಂದು ಬೆಳ್ಳಿಗೆ ಓರ್ವ 76 ವಯಸ್ಸಿನ ವೃದ್ಧ ಶಂಕಿತ ಕೊರೋನಾ ವೈರಸ್ ದಿಂದ ಸಾವನ್ನಪ್ಪಿದರು ಎಂದು ಅನುಮಾನ ವ್ಯಕ್ತವಾಗಿತ್ತು. ಮೃತ ವೃದ್ಧರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆಂದು ದೃಢಪಟ್ಟಿದೆ.

ಈ ಬಗ್ಗೆ ಆರೋಗ್ಯ ಸಚಿವರಾದ ಶ್ರೀರಾಮುಲು ಟ್ವೀಟ್ ಮಾಡುವ ಮೂಲಕ ಶಂಕಿತ 76 ವರ್ಷದ ಮೃತ ವ್ಯಕ್ತಿಗೆ ಕೊರೋನಾ ಇರುವ ಬಗ್ಗೆ ಖಚಿತವಾಗಿದೆ ಎಂದು ತಿಳಿಸಿದ್ದು, ಇವರ ಸಂಪರ್ಕ ಹೊಂದಿದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕ ವಾಗಿರಿಸಿ ನಿಗಾವಹಿಸಲಾಗುವುದೆಂದು ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ.

Contact Your\'s Advertisement; 9902492681

ಕೊರೋನ್ ವೈರಸ್ ನಿಂದ ಕಲಬುರಗಿ ವೃದ್ಧ ಸಾವು ಜಿಲ್ಲಾಧಿಕಾರಿಗಳ ಸ್ಪಷ್ಟನೆ

ಕಲಬುರಗಿ ನಗರದ ನಿವಾಸಿ ಮಹಮ್ಮದ್ ಹುಸೇನ್ ಸಿದ್ದಿಕಿ (ವಯಸ್ಸು 76) ಇವರು ಕರೋನಾ ವೈರಸ್ ದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಸ್ಪಷ್ಟನೆ ನೀಡಿದ್ದಾರೆ.

ಮೃತ ವ್ಯಕ್ತಿಯ ಕಾಯಿಲೆ ಬಗ್ಗೆ ಬೆಂಗಳೂರು ಲ್ಯಾಬ್ ಗೆ ಸೋಂಕು ರವಾನಿಸಲಾಯಿತು. ವರದಿ ಬರುವ ಮುಂಚೆ ವೃದ್ಧ ಮೃತಪಟ್ಟಿದ್ದಾರೆ. ಇಂದು ಬೆಂಗಳೂರು ಕೊರೋನಾ ತಪಾಸಣೆ ಕೇಂದ್ರ ಮೃತವ್ಯಕ್ತಿಗೆ ಕೊರೋನಾ ತಗುಲಿದೆ ಎಂದು ತಪಾಸಣೆ ಕೇಂದ್ರ ವರದಿ ನೀಡಿದೆ.

ಮೃತ ವ್ಯಕ್ತಿಯ ವೈರಸ್ ಶಂಕೆಯ ಹಿನ್ನಲೆಯ ಆರೋಗ್ಯ ಇಲಾಖೆ ಅಂತ್ಯಕ್ರಿಯೆಯಾಗುವವರೆಗೆ ಜಾಗೃತಿವಹಿಸಿ ಅಂತ್ಯಕ್ರಿಯೆಗೆ ಕ್ರಮ ಕೈಗೊಂಡಿದ್ದರು.

ವ್ಯಕ್ತಿಯ ಸಾವು ಕೊರೋನಾ ವೈರಸ್ ದಿಂದ ಆಗಿರುವ ವರದಿ ಜಿಲ್ಲೆಯ ಜನರಲ್ಲಿ ತಲ್ಲಣ ಸೃಷ್ಟಿಸಿದೆ. ಕೊರೋನ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ 76 ವರ್ಷದ ವೃದ್ಧ ಮಾ. 10 ರಂದು ಮೃತಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here