ಜೇವರ್ಗಿ: ಗ್ರಾಮದಲ್ಲಿ ಐವತ್ತುಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

0
231

ಕಲಬುರಗಿ: ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದಲ್ಲಿ ಜನ ನೀರು ಕುಡಿದು ಪ್ರತಿ ದಿನ 50 ಜನ ಜ್ವರ, ಕೆಮ್ಮು, ವಾಂತಿ, ಚೇಳಿ ಹೀಗೆ ನಾನಾ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರುತ್ತಿದ್ದಾರೆ.

ಒಂದು ವಾರದಿಂದ ಸತತವಾಗಿ ಈ ರೀತಿಯಾಗಿ ಜನ ಸರಕಾರಿ ಆಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆ ಗೆ ದಾಖಲಾಗುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಆಸ್ಪತ್ರೆಗೆ ದಾಖಲೆಯಾಗುತ್ತಿದ್ದಾರೆ. ಈ ರೀತಿ ಜನ ಆರೋಗ್ಯ ಹಾಳಾಗಿ ಆಸ್ಪತ್ರೆಗೆ ದಾಖಲೆಯಾಗುತ್ತಿರುವದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Contact Your\'s Advertisement; 9902492681

ಗ್ರಾಮ ಪಂಚಾಯತ್ ಸಿಬ್ಬಂದಿ ಪಂಪ ಆಪರೇಟರ್ ಮಹಿಳೆಯಾಗಿದ್ದು ಅವರ ಪರವಾಗಿ ಬೇರೆಯವರು ಕೆಲಸ ಮಾಡುತ್ತಿದ್ದಾರೆ. ಪೂರೈಕೆಯಾಗುವ ನೀರಿನ ಟ್ಯಾಂಕ್ ಸರಿಯಾಗಿ ಸ್ವಚ್ಛಗೊಳಿಸದೇ, ವರ್ಷಕ್ಕೆ ಒಮ್ಮೆ ಸ್ವಚ್ಛ ಮಾಡುವದ್ದು, ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ನೀರಿನಲ್ಲಿ ಹಾನಿಕಾರಕ ಜೀವಗಳು ತುಂಬಿವೆ. ಈ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತದೆ.

ಗ್ರಾಮದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ಚರಂಡಿ ನೀರು ರಸ್ತೆ ಮೇಲೆ ನಿಂತು ಸೊಳ್ಳೆಗಳು ಹುಟ್ಟಿಕೊಂಡು ಮಲೇರಿಯಾ, ಟೈಫಾಡ ರೋಗಗಳು ಹೆಚ್ಚುತ್ತಿವೆ. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಈ ಮಳೆಗಾಲದಲ್ಲಿ ಒಂದು ಬಾರಿಯೂ ಬ್ಲಿಚಿಂಗ ಪಾವಡರ್ ಸಿಪರಣೆ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋವಿಡ 3ನೇ ಅಲೆಯ ಭೀತಿ ಇದ್ದರು ಸಹ ಸ್ಯಾನಿಟಾಯೀಜರ್ ಸಿಂಪರಣೆ ಮಾಡಿಲ್ಲ ಎಂದು ಸ್ಥಳೀಯ ಜನ ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here