ಐತಿಹಾಸಿಕ ಪರಂಪರೆಯ ಅಪ್ಪನ ಜಾತ್ರೆಯನ್ನೇ ರದ್ದುಗೊಳಿಸಿದ ಕರೋನಾ ವೈರಸ್!?

0
206

ಕಲಬುರಗಿ: ಕರೋನಾ ವೈರಸ್ ನಿಂದಾಗಿ ಇಂದು ನಡೆಯಬೇಕಿದ್ದ ಇಲ್ಲಿ‌ನ ಆರಾಧ್ಯದೈವ ಮಹಾ ದಾಸೋಹಿ ಶರಣಬಸವೇಶ್ವರರ ಜಾತ್ರಾ ಮಹೋತ್ಸವವನ್ನೇ ರದ್ದುಗೊಳಿಸುವಂತಾಗಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಪ್ರಮುಖ ಪ್ರಸಿದ್ಧ ದೇವಸ್ಥಾನಗಳಾದ ಹಜರತ್ ಖಾಜಾ ಬಂದಾ ನವಾಜ್ ಮತ್ತು ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸೌಹಾರ್ದ ಕೇಂದ್ರಗಳಾಗಿ ಲಕ್ಷಾಂತರು ಭಕ್ತರು ಹೊಂದಿದ್ದಾರೆ.

Contact Your\'s Advertisement; 9902492681

ಈ ಎರಡು ದೇವಲಯಗಳ ಪ್ರತಿ ವರ್ಷ ಒಂದು ತಿಂಗಳು ಜಾತ್ರೆ ನಡೆಯುತ್ತದೆ. ಅಲ್ಲದೇ ದೇವಸ್ಥಾನ ಜಾತ್ರೆಗೆ ದರ್ಗಾ ಮತ್ತು ಶರಣಬಸವೇಶ್ವರ ನಡೆವೆ ಸೌಹಾರ್ದತೆಕಟ್ಟುವ ಕೆಲವು ವಾಡಿಕೆಗಳನ್ನು ದೇವಸ್ಥಾನ ಮತ್ತು ದರ್ಗಾದ ಪೀಠಾಧಿಪತಿ ನಡೆಸಿಕೊಂಡು ಬರುತಿದ್ದು, ಈ ಬಾರಿ ಈ ಮಹಾ ಮಾರಿ ಕೊರೋನಾ ಸೋಂಕು ಭಕ್ತರಿಗೆ ಆತಂಕಕ್ಕೆ ಸಿಲುಕಿಸಿದೆ ಎನ್ನಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ಈ ನೆಲದಲ್ಲಿ ಹೋಳಿ ಹುಣ್ಣಿಮೆ ಆದ ಐದು ದಿನಕ್ಕೆ ಶರಣನಸವೇಶ್ವರರ ಯಾತ್ರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿತ್ತು.

ನಾಡಿನ ವಿವಿಧ ಮೂಲೆ ಮೂಲೆಗಳಿಂದ ಭಕ್ತಾದಿಗಳು ಕಲಬುರಗಿಗೆ ಆಗಮಿಸಿ ಶರಣನ‌ ದರ್ಶನಾಶೀರ್ವಾದ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದರು.

ಕಲಬುರಗಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರಿಯ ಮತ್ತು ಗುಲ್ಬರ್ಗ ವಿಶ್ವ ವಿದ್ಯಾಲಯದ ಘಟಿಕೋತ್ಸ ರದ್ದು ಪಡಿಸಿ ತಾತ್ಕಾಲಿಕ ಸಮಯಕ್ಕೆ ಮುಂದೂಡಲಾಗಿದೆ. ಅದೇ ರೀತಿ ಸಭೆ ಸಮಾರಂಭ, ಮಾಲ್ ಹಾಗೂ ಜಾತ್ರೆ ಮಹೋತ್ಸವ ಮುಂಜಾಗ್ರತೆ ಕ್ರಮವಾಗಿ ರದ್ದು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಘೋಷಿಸಿದ್ದಾರೆ.

ಕಲಬುರಗಿ ಮೂಲದ ವ್ಯಕ್ತಿಯೊಬ್ಬರು ಕರೋನಾ ವೈರಸ್ ನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ. ಶರತ್ ಅವರು, ರಥೋತ್ಸವ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಕಾಪಾಡುವ ಹಿನ್ನೆಲೆಯಲ್ಲಿ ಈ ಕುರಿತು ತಡರಾತ್ರಿ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಮಹಾದಾಸೋಹ ಪೀಠದ ಈಗಿನ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು ಎನ್ನಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here