ಭಕ್ತರ ಉದ್ಘೋಷದಲ್ಲಿ ರಥೋತ್ಸವಕ್ಕೆ ಚಾಲನೆ

0
89

ಕಲಬುರಗಿ: ನಾಡಿನ ಜನರ ಆರಾದ್ಯ ದೇವರಾದ ಶ್ರೀ ಶರಣಬಸವೇಶ್ವರ ೧೯೮ನೇ ಜಾತ್ರೆ ಅಂಗವಾಗಿ ಕೇವಲ ಪೋಲೀಸ ಸಿಬ್ಬಂದಿ ಹಾಗೂ ಶರಣಬಸವೇಶ್ವರ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಿಂದ ಶುಕ್ರವಾರ ಸಂಜೆ ೪ ಗಂಟೆಗೆ ಶ್ರೀ ಶರಣಬಸವೇಶ್ವರ ರಥೋತ್ಸವ ಜರುಗಿತ್ತು.

ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿಯಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಹಾಗೂ ಅವರು ಶ್ರೀ ಶರಣಬಸವೇಶ್ವರರ ಮಹಿಮೆಯಿಂದ ಕೂಡಿದ ಪರುಷ ಬಟ್ಟಲು, (ಬೆಳ್ಳಿಯ ಬಟ್ಟಲು)ನ್ನು ದಾಸೋಹ ಮಹಾಮನೆಯಲ್ಲಿ ಪ್ರದರ್ಶಿಸಿದರು. ಚಿ.ದೊಡ್ಡಪ್ಪ ಅಪ್ಪಾ ಹಾಗೂ ಮಾತೋಶ್ರೀ ದಾಕ್ಷಾಯಿಣಿ ಅವ್ವನವರು ಪರುಷ ಬಟ್ಟಲು, (ಬೆಳ್ಳಿಯ ಬಟ್ಟಲು)ನ್ನು ಸಾರ್ವಜನಿಕರಿಗೆ ಪ್ರದರ್ಶಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಸರ್ಕಾರ ಆದೇಶಕ್ಕೆ ಸಹಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ರಥೋತ್ಸವದಲ್ಲಿ ಭಾಗವಹಿಸದಂತೆ ನೋಡಿಕೊಳ್ಳಲಾಯಿತು. ಯಾತ್ರಾ ದಿನದಿಂದ ಯುಗಾದಿ ಹಬ್ಬದವರೆಗೆ ಲಕ್ಷಾಂತರ ಜನ ದೇವರ ದರ್ಶನಕ್ಕಾಗಿ ಆಗಮಿಸುತ್ತಾರೆ. ದೇವರ ದರ್ಶನ ಪಡೆದುಕೊಂಡು ಪ್ರಸಾದ ಸೇವೆನೆ ಮಾಡಿ ತಮ್ಮ ತಮ್ಮ ಸ್ಥಳಗಳಿಗೆ ಹಿಂದುರಗಬೇಕೆಂದು ಡಾ. ಶರಣಬಸವಪ್ಪ ಅಪ್ಪಾ ಶುಕ್ರವಾರ ತಿಳಿಸಿದರು.

Contact Your\'s Advertisement; 9902492681

ಜನರು ಮಾಂಸಹಾರ ಸೇವನೆ ಕಡಿಮೆಗೊಳಿಸಬೇಕು. ಆಹಾರ ಉತ್ಪನ್ನಗಳಾದ ಉಳಾಗಡ್ಡಿ, ಬೆಳ್ಳುಳ್ಳಿಗಳಿಂದ ಎಷೆಲ್ಲ ರೋಗಗಳನ್ನು ಗುಣಪಡಿಸಬಹುದು. ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಡಾ. ಅಪ್ಪಾ ಹೇಳಿದರು. ರಥೋತ್ಸವದ ಸಕಲ ಸಂಪ್ರದಾಯವನ್ನು ಕಡೆಗಣಿಸದಂತೆ ನೊಡಿಕೊಳ್ಳಲಾಯಿತು. ಡೊಳ್ಳು, ಭಜನೆ, ಸುಮಂಗಳೆಯರ ಕೈಯಲ್ಲಿ ಆರತಿ ನಂದಿಕೋಲುಗಳ ಮೆರವಣಿಗೆ ಇತ್ಯಾದಿ ಸಂಪ್ರದಾಯವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ ಶರತ್ ಅಂಗನವಾಡಿ ಸೇರುದಂತೆ ಎಲ್ಲಾ ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ, ಮಾಲ್, ಚಲನಚಿತ್ರ ಮಂದಿರಗಳಿಗೆ ಒಂದುವಾರ ಕಾಲ ರಜೆ ಘೋಷಿಸಿದ್ದರು.

ಈ ಸಂದರ್ಭದಲ್ಲಿ ಮಾತೋಶ್ರೀ ದಾಕ್ಷಾಯಿಣಿ ಅಪ್ಪಾ, ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ, ವಿವಿ. ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ. ಲಕ್ಷ್ಮಿ ಮಾಕಾ ಡಾ. ಸುರೇಶ ನಂದಗಾಂವ ಪೋಲಿಸ್ ಸಿಬ್ಬಂದಿ ವಿಶ್ವವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here