ಶಹಾಬಾದ: ಕಾರ್ಲ್‌ಮಾರ್ಕ್ಸ ರವರು ಕಾರ್ಮಿಕವರ್ಗದ ಶ್ರೇಷ್ಠ ಚಿಂತಕರು ಎಂದು ಎಸ್.ಯು.ಸಿ.ಐ.ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೆಡ್ ರಾಮಣ್ಣ ಎಸ್.ಇಬ್ರಾಹಿಂಪುರ ಹೇಳಿದರು.
ಸಮಿತಿಯು ಹಮ್ಮಿಕೊಂಡಿದ್ದ ೧೩೭ನೇ ಸ್ಮರಣ ದಿನ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಮಾತನಾಡಿದರು ಮುಂದುವರೆದು ಅವರು ಕಾರ್ಲ್‌ಮಾಕ್ಸ್ ರವರ ವಿಚಾರದಾರೆಯಿಂದ ಪ್ರಪಂಚದ ೫೦% ಬಾಗ ಕ್ರಾಂತಿ ನೆರವೆರಿಸಿದ್ದು,ಅದರಲ್ಲಿ ರಷ್ಯ,ಚಿನಾ,ವಿಯಾಟ್ನಾಮ್,ಕ್ಯೂಬಾ ಸೆರಿ ಹಲಾವಾರು ದೇಶಗಳಲ್ಲಿ ಕ್ರಾಂತಿ ಜರಗಿತ್ತು. ಇಂದಿನ ಬಂಡವಾಳಶಾಹಿ ದೇಶಗಳಲ್ಲಿ ಕ್ರಾಂತಿ ಮಾಡಲು ಇವರ ವಿಚಾರ ಬಹಳ ಪ್ರಸ್ತುತವಾಗಿದ್ದರಿಂದ ರೈತಕೃಷಿಕಾರ್ಮಿಕರು,ವಿದ್ಯಾರ್ಥಿ-ಯುಜನರು ಇವರ ವಿಚಾರ ತಿಳಿದುಕೋಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯೆಕ್ಷತೆ ವಹಿಸಿದ್ದ ಎಸ್.ಯು.ಸಿ.ಐ. ಕಮುನಿಷ್ಟ ಪಕ್ಷದ ಶಹಾಬಾದ ಕಾರ್ಯದರ್ಶಿಗಳಾದ ಕಾಮ್ರೆಡ್ ಗಣಪತ್ ರಾವ್.ಕೆ.ಮಾನೆ ರವರು ಮಾತನಾಡುತ್ತ ಇಂದಿನ ಭಾರತದ ದೇಶದಲ್ಲಿ ಬಂಡವಾಳಶಾಹಿ ವಿರೋದಿ ಸಮಾಜವಾದಿ ಕ್ರಾಂತಿ ಕನಸು ಕಂಡಿದ್ದ ಭಗತ್ ಸಿಂಗ್, ನೇತಾಜಿಯವರ ಕನಸು ನನಸು ಮಾಡಲು ಕಾರ್ಲ್‌ಮಾರ್ಕ್ಸ ರವರ ವಿಚಾರ ಬಹಳ ಅವಶ್ಯಕವೆಂದರು.
ಎಸ್.ಯು.ಸಿ.ಐ. ಕಮುನಿಷ್ಟ ಪಕ್ಷದ ಶಹಾಬಾದ ಸದಸ್ಯರಾದ ಕಾಮ್ರೆಡ್ ಜಗನ್ನಾಥ ಎಸ್,ಹೆಚ್ ರವರ ಕಾರ್ಯಕ್ರಮವನ್ನು ನಿರುಪಣೆ ಮಾಡಿದರು ಕಾರ್ಯಕ್ರಮದಲ್ಲಿ ಎಸ್.ಯು.ಸಿ.ಐ. ಕಮುನಿಷ್ಟ ಪಕ್ಷದ ಶಹಾಬಾದ ಸದಸ್ಯರಾದ ಕಾಮ್ರೆಡ್ ಸಿದ್ದು ಚೌದರಿ, ನಿಲಕಂಠ ಎಮ್.ಹುಲಿ, ಶಿವುಕುಮಾರ.ಇ.ಕೆ, ತುಳಜರಾಮ ಎನ್.P, ರಮೇಶ ದೆವಕರ್,ರಾಧಿಕ ಚೌದರಿ,ಕಿರಣ್.ಜಿ.ಮಾನೆ ಇದ್ದರು.