ಕೊರೋನಾ ವೈರಸ್ ಭೀತಿ: ಮುನ್ನೆಚರಿಕೆಯ ಸಲಹೆಗಳು

0
164

ಕಲಬುರಗಿ: ಕೊರೋನಾ ವೈರಸ್ ಕುರಿತು ಸಾರ್ವಜನಿಕರು ಭಯಭೀತರಾಗದೆ ಕೆಳಕಂಡಂತೆ ಅಗತ್ಯ ಮುನ್ನೆಚರಿಕೆ ಕ್ರಮ ವಹಿಸಬಹುದಾಗಿದೆ.

ಏನು ಮಾಡಬೇಕು:

  • ಆಗಾಗ ಸಾಬೂನು ಮತ್ತು ನೀರಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು.
  • ರೋಗದ ಲಕ್ಷಣಗಳಾದ ಜ್ವರ, ನೆಗಡಿ/ ಕೆಮ್ಮು, ಉಸಿರಾಟದ ತೊಂದರೆಯಾಗುತ್ತಿದಲ್ಲಿ ಮೂಗು ಮತ್ತು ಬಾಯಿಯನ್ನು ಕರವಸ್ತ್ರ ಅಥವಾ ಮಾಸ್ಕ್‌ಗಳಿಂದ ಮುಚ್ಚಿಕೊಂಡು ತಕ್ಷಣ ವೈದ್ಯರನ್ನು ಭೇಟಿ ಮಾಡುವುದು.
  • ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಅಥವಾ ಮಾಸ್ಕ್‌ಗಳಿಂದ ಮುಚ್ಚಿಕೊಳ್ಳಬೇಕು.
  • ಬಳಸಿದ ಟಿಶ್ಯೂ, ಕರವಸ್ತ್ರ ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿಡಬೇಕು.
  • ರೋಗದ ಲಕ್ಷಣಗಳು ಮತ್ತು ಚಿಹ್ನೆಗಳಿದ್ದರೆ 24/7 ಆರೋಗ್ಯ ಸಹಾಯವಾಣಿ ೧೦೪ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದು.
  • ದೊಡ್ಡ ಸಭೆ-ಸಮಾರಂಭಗಳಿಗೆ ಭಾಗವಹಿಸುವುದನ್ನು ತಪ್ಪಿಸುವುದು.
ಏನು ಮಾಡಬಾರದು: 
  1. ನಿಮಗೆ ಕೆಮ್ಮು ಮತ್ತು ಜ್ವರ ಕಂಡುಬಂದರೆ ಬೇರೆಯವರೊಡನೆ ನಿಕಟ ಸಂಪರ್ಕ ಹೊಂದಬಾರದು.
  2. ನಿಮ್ಮ ಕಣ್ಣುಗಳು, ಮೂಗು, ಬಾಯಿಯನ್ನು ಆಗಿಂದಾಗ್ಗೆ ಸ್ಪರ್ಶಿಸಬಾರದು.
  3. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here