ಮಲ್ಲಾಬಾದ್ ಏತನೀರಾವರಿಗೆ ಆಗ್ರಹಿಸಿ ಮಾ.23ಕ್ಕೆ ಬ್ರಹತ್ ಪ್ರತಿಭಟನೆ

0
129

ಯಡ್ರಾಮಿ: ನೀರಾವರಿಯಿಂದ ವಂಚಿತವಾಗಿರುವ ಯಡ್ರಾಮಿ ತಾಲ್ಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಇಂದು ಇಜೇರಿಯಲ್ಲಿ ರೈತ ಮುಖಂಡರು ಮತ್ತು ವಿವಿಧ ಹಳ್ಳಿಗಳ ಪ್ರಮುಖರು ಸಭೆ ಸೇರಿ ಚರ್ಚಿಸಿದರು.

ಸಭೆಯಲ್ಲಿ ಮಾತನಾಡಿದ ಮುಖಂಡರು ಮಲ್ಲಾಬಾದ್ ಏತ ನೀರಾವರಿ ನಮ್ಮ ಭಾಗದ ಪ್ರಮುಖ ನಿರಾವರಿ ಯೋಜನೆಯಾಗಿದೆ. ಯಾವುದೇ ಸರಕಾರ ಬಂದರೂ ಈ ಯೋಜನೆ ಪೂರ್ಣಗೊಳಿಸಲು ಪ್ರಯತ್ತಿಸುತ್ತಿಲ್ಲ ಎಂದು ಆರೋಪಿಸಿದರು. ಈ ಯೋಜನೆಗೆ ಸರಕಾರ ಸುಮಾರು 600ಕೋಟಿ ಅಂದಾಜು ಪಟ್ಟಿ ತಯಾರಿಸಿದೆ. ಆದರೆ ಈವರೆಗೆ ಬಿಡುಗಡೆಯಾಗಿದ್ದು ಕೇವಲ 167 ಕೋಟಿ ಮಾತ್ರ ಎಂದು ಅಸಮಧಾನ ವ್ಶಕ್ತಪಡಿಸಿದರು.

Contact Your\'s Advertisement; 9902492681

ಈ ನಿರಾವರಿ ಯೋಜನೆಯ ಬಗ್ಗೆ ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಏಕೆ? ಎಂದು ಪ್ರಶ್ನಿಸಿದ ಮುಖಂಡರುˌ ಶಾಸಕ ಡಾ ಅಜಯ್ ಸಿಂಗ್ ರವರು ಪ್ರಸ್ತುತ ಅಧಿವೇಶನದಲ್ಲಿ ನಿರಾವರಿ ಮಂತ್ರಿಗಳಿಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ ಸುಪ್ರೀಂ ಕೋರ್ಟ್ ನ ತಾಂತ್ರಿಕ ಕಾರಣಗಳನ್ನು ನೀಡಿದ್ದಾರೆ. ಇದು ಸರಿಯಲ್ಲ. ಗುತ್ತಿ ಬಸವಣ್ಣ ಮತ್ತು ವಿಜಯಪುರ ಜಿಲ್ಲೆಗೆ ಸುಪ್ರೀಂ ಕೋರ್ಟ್ ತೀರ್ಪು ಅನ್ವಯಿಸುವದಿಲ್ಲವೇ? ಎಂದು ಪ್ರಶ್ನಿಸಿದರು.

ಮಲ್ಲಾಬಾದ್ ಏತ ನೀರಾವರಿ ಯೋಜನೆ ಜಾರಿಗಾಗಿ ಮತ್ತು ತಕ್ಷಣ ಯೋಜನೆಯ ಅಂದಾಜು ವೆಚ್ಚದ 600 ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಾರ್ಚ್ 21 ಮತ್ತು 22 ರಂದು ಈ ಯೋಜನೆಗೆ ಒಳಪಡುವ ಹಳ್ಳಿಗಳಲ್ಲಿ ಜನಜಾಗೃತಿ ಸಭೆಗಳನ್ನು ನಡೆಸುವುದು. ಮತ್ತು ಮಾರ್ಚ್ 23 ರಂದು ಯಡ್ರಾಮಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಮುಖಂಡರಾದ ಲಾಲಯ್ಯಾ ಗುತ್ತೆದಾರˌ ರುಕುಮ್ ಪಟೇಲ ಪೋಲಿಸ್ ಪಾಟೀಲˌ ಶೌಕತ್ ಅಲಿ ಆಲೂರುˌ ಸಂಗನ ಗೌಡ ಗುಗಿಹಾಳˌ ಕಲ್ಲಯ್ಯಾ ಸ್ವಾಮಿˌ ಚಂದ್ರಕಾಂತ ಯಂಕಂಚಿˌ ಬಸವರಾಜ ಅಣಜಗಿˌ ಮಲ್ಕಪ್ಪ ಸಿಡ್ಲಿˌ ಮಂಜುನಾಥ ರೆಡ್ಡಿˌ ದೇವಿಂದ್ರಪ್ಪ ಮುತ್ತಕೋಡˌ ವೆಂಕಟೇಶ ದೊರೆˌ ಗೌಡಪ್ಪಗೌಡ ಮಲ್ಲಾಬಾದ್ˌ ಗೌಡಪ್ಪಗೌಡ ಪಾಟೀಲ ಗುಗಿಹಾಳˌ ಅಯ್ಯಣ್ಣಗೌಡ ಬಿರಾದಾರˌ ಭೀಮನಗೌಡ ಜಮಖಂಡಿˌ ಬೀಮಣ್ಣ ದೊರೆˌ ಬಾಪುಗೌಡ ಮಾಲಿ ಪಾಟೀಲˌ ಶಿವಪ್ಪ ಡೀಲರ್ ಜವಳಗಿˌ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here