ನಿಂತ ಲಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲಿಯೇ ಇಬ್ಬರ ಸಾವು

0
83

ಕಲಬುರಗಿ: ನಿಂತ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನಪ್ಪಿರು ಘಟನೆ ಸೇಡಂ ರಸ್ತೆಯ ಮಾಡಬೂಳ ಬಳಿ ನಡೆದಿದೆ.

ಬೈಕ ಸವಾರ ಬಸವರಾಜ್ ಕೆಸರಟಗಿ (35), ಹಿಂಬದಿ ಸವಾರ ನಾಗಣ್ಣ ಮಳಖೇಡ ( 32 ) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಕಲಬುರಗಿದಿಂದ ಮಳಖೇಡಗೆ ಹೊರಟ್ಟಿದ ಇಬ್ಬರು ಬೈಕ್ ಸವಾರರು ಮಾಡಬೂಳ ಹತ್ತಿರ ನಿಂತಿರುವ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.

Contact Your\'s Advertisement; 9902492681

ಮೃತರಿಬ್ಬರು ಮಳಿಖೇಡ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತಿದ್ದರು ಎಂದು ತಿಳಿದುಬಂದಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಮಾಡಬೂಳ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here