ಕಳೆದು ಹೋಗಿದೆ ನನ್ನ ಕನಸು

0
140

ಕಳೆದುಕೊಂಡವರ ನೋವು ಕಳೆದುಕೊಂಡವರಿಗೆ ಮಾತ್ರ ಗೊತ್ತಂತೆ !
ನಾನು ಸಹ ಕಳೆದುಕೊಂಡವನೇ
ಅದರ ನೋವನ್ನು ಅನುಭವಿಸಿದವನೇ…

ನಾನು ಕಳೆದುಕೊಂಡಿದ್ದು ನನ್ನ ಕನಸನ್ನು, ಅರ್ಧ ಬದುಕನ್ನು ಬದುಕಿಗೆ ಅರ್ಥ ನೀಡಲು ಬಂದಿದ್ದ ಚೈತನ್ಯದ ಚಿಲುಮೆಯನ್ನುನಾನು ಕಳೆದುಕೊಂಡಿದ್ದು ಇನ್ನೊಬ್ಬನಿಗೆ ಸಿಕ್ಕಿದೆ ಸಿಕ್ಕಿರುವ ಅವನಿಗೆ ಅದರ ಮಹತ್ವ ಗೊತ್ತಾಗಿದೆಯೋ ಇಲ್ಲವೋ ?
ಅದನ್ನು ಅರ್ಥಮಾಡಿಕೊಳ್ಳುವ ಸಹೃದಯತೆ ಅವನಲ್ಲಿದೆಯೋ ಇಲ್ಲವೋ ?

Contact Your\'s Advertisement; 9902492681

ಪಡೆದುಕೊಂಡವನ ಬದುಕನ್ನು ಉಜ್ವಲಗೊಳಿಸುವ ಶಕ್ತಿ ನನ್ನ ಕನಸಿಗಿದೆ ನನ್ನ ಕನಸಿಗೆ ಸ್ವಾರ್ಥವಿಲ್ಲ
ಅದು ಬಯಸುವುದು ಪರಹಿತವನ್ನು
ಒಂದು ಹಿಡಿ ಪ್ರೀತಿ ಸಾಕು ನನ್ನ ಕನಸಿಗೆ
ಪ್ರೀತಿ ಕೊಟ್ಟವರ ಬದುಕನ್ನು ನನಸು ಮಾಡಲು ತುಡಿಯುತ್ತದೆ…

ನನ್ನ ಕನಸು ಕಳೆದುಹೋಗಿದೆ
ಕ್ಷಮಿಸಿ ನಾನು ಕಳೆದುಕೊಂಡಿದ್ದೇನೆ.

✍ರಾಘವೇಂದ್ರ ಮಾಸ್ತರ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here