ಮೇ 11 ರಂದು ಅಂಬೇಡ್ಕರ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹಗಳು

0
140

ಸುರಪುರ: ಪ್ರತಿ ವರ್ಷದಂತೆ ಈ ವರ್ಷವು ಹಮ್ಮಿಕೊಂಡಿರುವ ಬುದ್ಧ ಬಸವರ ಸ್ಮರಣೆಯಲ್ಲಿ ಡಾ: ಬಾಬಾ ಸಾಹೇಬ ಅಂಬೇಡ್ಕರರ ೧೨೯ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಮೇ ೧೧ ರಂದು ಹಮ್ಮಿಕೊಳ್ಳಲಾಗಿದೆ.ಅಲ್ಲದೆ ಈಬಾರಿ ಜಯಂತಿ ಅಂಗವಾಗಿ ಸರ್ವಧರ್ಮಿಯರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸಮನಿ ತಿಳಿಸಿದರು.

ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರರ ೧೨೯ನೇ ಜಯಂತಿ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಮೇ ೧೧ ರಂದು ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ಈಬಾರಿ ವಿಶೇಷವಾಗಿ ಅಂಬೇಡ್ಕರರ ಮೊಮ್ಮಕ್ಕಳಾದ ಪ್ರಕಾಶ ಅಂಬೇಡ್ಕರ ಅಥವಾ ರಾಜರತ್ನ ಅಂಬೇಡ್ಕರ ಭಾಗವಹಿಸುವ ನಿರೀಕ್ಷೆಯಿದೆ.ಅಲ್ಲದೆ ಅನೇಕ ಜನ ಸ್ವಾಮೀಜಿಗಳು,ಚಿಂತಕರು ಮತ್ತು ಬುದ್ಧ ಬಸವಣ್ಣ ಹಾಗೂ ಅಂಬೇಡ್ಕರರ ಅನುಯಾಯಿಗಳು ಭಾಗವಹಿಸಲಿದ್ದಾರೆ.ಅಲ್ಲದೆ ಗವಿ ಬುಧ್ಧ ವಿಹಾರದಿಂದ ಅಂಬೇಡ್ಕರ ವೃತ್ತದ ವರೆಗೆ ವಿವಿಧ ವಾದ್ಯ ಮೇಳಗಳ ಮೆರವಣಿಗೆಯು ನಡೆಯಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಜಯಂತಿ ಆಚರಣಾ ಸಮಿತಿಯ ಕಾರ್ಯಧ್ಯಕ್ಷರನ್ನಾಗಿ ಮಾನಪ್ಪ ಕಟ್ಟಿಮನಿಯವರನ್ನು ನೇಮಕಗೊಳಿಸಲಾಯಿತು.ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ,ಪ್ರಧಾನ ಕಾರ್ಯದರ್ಶಿ ಭೀಮರಾಯ ಸಿಂದಗೇರಿ,ಉಪಾಧ್ಯಕ್ಷ ನಿಂಗಣ್ಣ ಗೋನಾಲ,ರಾಮಚಂದ್ರ ವಾಗಣಗೇರಾ,ಖಜಾಂಚಿ ಮಾಳಪ್ಪ ಕಿರದಳ್ಳಿ,ರಾಹುಲ್ ಹುಲಿಮನಿ,ಯಲ್ಲಪ್ಪ ಚಿಂಚೋಡಿ, ಮಲ್ಕಪ್ಪ ತೇಲ್ಕರ್,ಧರ್ಮರಾಜ ಬಡಿಗೇರ,ರಮೇಶ ಅರಕೇರಿ,ಆಕಾಶ ಕಟ್ಟಿಮನಿ,ಶೇಖರ ಜೀವಣಗಿ,ರೇವಣಸಿದ್ದ ಮಾಲಗತ್ತಿ,ಕೆ.ಎಮ್.ಪಟೇಲ್, ಅಜ್ಮೀರ್,ರಮೇಶ ಬಡಿಗೇರ,ಗೌತಮ್ ಬಡಿಗೇರ,ಪರಶುರಾಮ ನಾಟೆಕರ್.ಮಹೇಶ ಹಸನಾಪುರ,ವಿಶ್ವನಾಥ ಹೊಸಮನಿ,ಸಾಹೇಬಗೌಡ ವಾಗಣಗೇರಾ,ನಿಂಗರಾಜ ಹುಲಿಕಾರ್,ಚಂದ್ರಶೇಖರ ಕಟ್ಟಿಮನಿ,ಮೊನಪ್ಪ ಹುಣಸಳ್ಳಿ,ವೆಂಕಟೇಶ ದೇವಾಪುರ,ಯಂಕಪ್ಪ ದೇವಿಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here