ಸುರಪುರ: ಇಂದು ದೇಶದಲ್ಲಿ ಮಹಾಮಾರಿಯಾಗಿರುವ ಕೊರೊನಾ ವೈರಸ್ ಸೊಂಕದಂತೆ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಲಾದ ಕರಪತ್ರಗಳನ್ನು ನಗರದ ರಂಗಂಪೇಟ,ತಿಮ್ಮಾಪುರ ಮತ್ತು ಸುರಪುರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಹಂಚುತ್ತಾ ಕೊರೊನಾ ಕುರಿತು ಜಾಗೃತಿ ಮೂಡಿಸಿದರು.ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್,ಸಂಗಣ್ಣ ಬಾಕ್ಲಿ,ಶೌಕತ್ ಅಲಿ,ಅಲ್ತಾಫ್ ಸಗರಿ,ಚಂದಪ್ಪ ತಳವಾರಗೇರಾ,ನಜೀರ್ ಹೈಮದ್,ಮಹಿಬೂಬ ಅಲಿ ಸೇರಿದಂತೆ ಅನೇಕರಿದ್ದರು.