ನಗರದಲ್ಲಿ ಸ್ವಚ್ಛತೆಗೆ ಆಗ್ರಹಿಸಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಮನವಿ

0
30

ಸುರಪುರ: ಬೇಸಿಗೆ ಆರಂಭವಾಗಿದ್ದು ಜನರಲ್ಲಿ ವಿವಿಧ ಕಾಯಿಲೆಗಳು ಹರಡಲು ಆರಂಭಿಸುತ್ತವೆ.ನಗರದಲ್ಲಿ ಸ್ವಚ್ಛತೆಯಿಲ್ಲದೆ ಚರಂಡಿಗಳು ತುಂಬಿ ದುರ್ನಾತ ಬೀರುತ್ತಿವೆ.ಕಸವು ಕೂಡ ಅನೇಕ ಕಡೆಗಳಲ್ಲಿ ಹಾಗೆಯೇ ಇರುತ್ತದೆ.ಸ್ವಚ್ಛತೆಗೆ ಕ್ರಮವಹಿಸುವಂತೆ ಹಜರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಜಿಲ್ಲಾಧ್ಯಕ್ಷ ಮಹ್ಮದ್ ಮೌಲಾ ಸೌದಾಗರ್ ಆಗ್ರಹಿಸಿದರು.

ನಗರಸಭೆ ಮುಂದೆ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ನಗರದಲ್ಲಿನ ಜನರಿಗೆ ಸರಿಯಾದ ಕುಡಿಯುವ ನೀರಿಲ್ಲ,ಫೀಲ್ಟ್‌ರ್ ಮಾಡದೆ ಹೊಲಸಾದ ನೀರನ್ನೆ ಬಿಡಲಾಗುತ್ತಿದೆ.ಇದರಿಂದ ಜನರಲ್ಲಿ ರೋಗ ಹರಡುವ ಸಾಧ್ಯತೆಯಿದೆ.ಆದ್ದರಿಂದ ಸ್ವಚ್ಛ ನೀರು ಬಿಡಲು ಕ್ರಮ ಕೈಗೊಳ್ಳಬೇಕು.ಮತ್ತು ಹೋಟೆಲ್,ಚಹಾ ಬಂಡಿಗಳಲ್ಲಿಯೂ ಸ್ವಚ್ಛತೆಯಿಲ್ಲ ಹಾಗು ಬಾವಿ ನೀರನ್ನೆ ಕುಡಿಯಲು ಕೊಡುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.ಹೋಟೆಲುಗಳಲ್ಲಿ ನಿನ್ನೆ ಮಾಡಿದ ಪದಾರ್ಥವನ್ನೆ ಫ್ರೀಜಿನಲ್ಲಿಟ್ಟು ಅದನ್ನೆ ಕೊಡುತ್ತಾರೆ.

Contact Your\'s Advertisement; 9902492681

ಹೋಟೆಲುಗಳಲ್ಲಿ ಸರಿಯಾಗಿ ತೊಳೆದಿರದ ಪ್ಲೇಟುಗಳು ಹಾಗೆಯೇ ಇರುತ್ತೆವೆ.ಇಂತಹ ಹೋಟೆಲುಗಳ ಮೇಲೆ ದಾಳಿ ಮಾಡಿ ಕೇಸು ದಾಖಲಿಸಬೇಕು. ಮಾಂಸದ ಅಂಗಡಿಗಳ ಬಳಿ ಸ್ವಚ್ಛತೆ ಇಲ್ಲದೆ ಗಲೀಜಾಗಿರುತ್ತದೆ.ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.ಈಗಾಗಲೆ ಕೊರೊನಾ ಮಹಾಮಾರಿ ಎಲ್ಲೆಡೆ ಆತಂಕ ಸೃಷ್ಟಿಸಿದೆ,ಬೇಸಿಗೆಯಾದ್ದರಿಂದ ನೀರಿನಿಂದ ಅನೇಕ ರೋಗಗಳು ಬರುತ್ತವೆ.ಆದ್ದರಿಂದ ನಗರದಲ್ಲಿ ಸ್ವಚ್ಛತೆಗೆ ದಿಟ್ಟ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ನಗರಸಭೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿ ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿಯವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ರತ್ನರಾಜ ಸಾಲಿಮನಿ,ಜಿಲ್ಲಾ ಕಾರ್ಯದರ್ಶಿ ಶೇಖ್ ಅಮ್ಜಾದ್ ಹುಸೇನ್,ಅಬ್ದುಲ್ ರೌಫ್,ಆನಂದ ಕಟ್ಟಿಮನಿ,ಅಬೀದ್ ಹುಸೇನ್ ಪಗಡಿ,ಇಮಾಮ್ ವಾಗಣಗೇರಾ,ಇಮ್ತಾಜ್ ಪಟೇಲ್,ಸಾಜಿದ್ ಅಹ್ಮದ ದಖನಿ,ಅಬ್ದುಲ್ ಮನಾನ್ ನಾಶಿ,ಚಾಂದಪಾಶಾ ಸಂತ್ರಸವಾಡಿ,ಮುನ್ನಾ ದಖನಿ,ರಜಾಕ್ ಸಂತ್ರಸವಾಡಿ,ಅಜ್ಜು ಕಬಾಡಗೇರಾ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here