ಬರೀ ಸಭೆಗಳ ನಡೆಸುವುದು ಬಿಡಿ ಜನರಲ್ಲಿ ಜಾಗೃತಿ ಮೂಡಿಸಿ: ವೆಂಕೋಬ ದೊರೆ

0
75

ಸುರಪುರ: ಈಗಾಗಲೇ ಕೊರೊನಾ ವೈರಸ್ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಲಿಟ್ಟು ದೇಶದಲ್ಲಿ ಮೊದಚನೆ ಬಲಿ ಪಡೆದಿದೆ.ಇನ್ನು ನಮ್ಮ ತಾಲೂಕಿನಲ್ಲಿಯೆ ಅನೇಕರು ವಿದೇಶಗಳಿಂದ ಬಂದಿದ್ದಾರೆ.ಇನ್ನು ರೋಗ ಎಲ್ಲೆಡೆ ಹರಡುವ ಭೀತಿಯಿದ್ದು ತಾಲುಕು ಆಡಳಿತ ಬರೀ ಸಭೆಗಳ ಮಾಡುವುದು ಬಿಟ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಒತ್ತಾಯಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತ್ತು ನಗರದಲ್ಲಿಯು ವಿದೇಶದಿಂದ ಜನರು ಬಂದಿದ್ದಾರೆ.ಆದ್ದರಿಂದ ತಾಲೂಕಿನ ಜನರಿಗೆ ಕೊರೊನಾ ಭೀತಿ ಹೆಚ್ಚಾಗಿದ್ದೂ ತಾಲೂಕು ಆಡಳಿತ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಕೊಳ್ಳಬೇಕು ಮತ್ತು ನಗರದ ಬಸ್ ನಿಲ್ದಾಣದ ಬಳಿಯಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.ತಾಲೂಕಿನ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಜನರು ಪರದಾಡುವ ಸ್ಥಿತಿಯುಂಟಾಗಿದೆ.ಕೂಡಲೆ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್,ಶ್ರೀನಿವಾಸ ನಾಯಕ,ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ದೇವಿಂದ್ರಪ್ಪ ಟಿ,ಮಹ್ಮದ್ ಶೌಕತ್ ಅಲಿ ಖುರೇಶಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here