ಕೊರೊನಾ ಲಕ್ಷಣವುಳ್ಳ ರೋಗಿಗಳು ಬಂದರೆ ಮಾಹಿತಿ ನೀಡಿ: ಡಾ.ಆರ್.ವಿ.ಎನ್

0
104

ಸುರಪುರ: ತಾಲುಕಿನಲ್ಲಿ ಇದುವರೆಗೆ ಒಟ್ಟು ಹನ್ನೆರಡು ಜನ ವಿದೇಶದಿಂದ ಬಂದವರನ್ನು ಗುರುತಿಸಿ ಪರೀಕ್ಷೆಗೊಳಪಡಿಸಲಾಗಿದೆ,ಯಾರಲ್ಲೂ ಕೊರೊನಾ ರೋಗದ ವೈರಸ್ ಕಂಡುಬಂದಿಲ್ಲ,ನಿಮ್ಮ ಬಳಿಗೆ ಯಾವುದೇ ಕೊರೊನಾ ಲಕ್ಷಣವುಳ್ಳ ರೋಗಿಗಳು ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಖಾಸಗಿ ವೈದ್ಯರಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಸೂಚಿಸಿದರು.

ನಗರದ ಟಿಹೆಚ್‌ಒ ಕಚೇರಿಯಲ್ಲಿ ಖಾಸಗಿ ವೈದ್ಯರ ಸಭೆ ನಡೆಸಿ ಮಾತನಾಡಿ,ನಮ್ಮ ಗಮನಕ್ಕೆ ಬಂದಿರುವವರನ್ನು ಈಗಾಗಲೆ ಪರೀಕ್ಷೆಗೊಳಪಡಿಸಿ ದಿನಾಲು ಅವರ ಆರೋಗ್ಯವನ್ನು ಪರೀಕ್ಷಿಸಲಾಗುತ್ತಿದೆ.ತಮ್ಮ ಬಳಿಯಲ್ಲಿ ಬರುವವರ ಬಗ್ಗೆ ಮಾಹಿತಿ ನೀಡಿದಲ್ಲಿ,ಅವರಿಗಾಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಕೊರೊನಾ ರೋಗಕ್ಕೆ ಚಿಕಿತ್ಸೆ ಇದೆ ಅದರ ಬಗ್ಗೆ ಜನರು ಆತಂಕ ಪಡಬೇಕಿಲ್ಲ,ನಮ್ಮ ಸಂಪರ್ಕದ ವೈದ್ಯರೊಬ್ಬರು ಡಾ. ಪತಂಜಲಿ ಎಂಬುವವರು ಇಂಗ್ಲೆಂಡಿನಲ್ಲಿ ಸುಮಾರು ೧೬ ಜನ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ನೀಡಿ ಆರಾಮಾಗಿಸಿದ್ದಾರೆ.ವೈರಸ್ ಲಕ್ಷಣ ಕಂಡ ಕುಡಲೆ ಚಿಕಿತ್ಸೆ ಆರಂಭಿಸಿದರೆ ಗುಣಮುಖರಾಗುತ್ತಾರೆ ಭಯ ಬೇಡ ಎಂದರು.

Contact Your\'s Advertisement; 9902492681

ಎಲ್ಲರು ಮಾಸ್ಕ್ ಧರಿಸುವು ಅವಶ್ಯಕತೆಯು ಇಲ್ಲ,ಎಲ್ಲಾದರು ಕೊರೊನಾ ಸೊಂಕಿರುವ ಪಾಸಿಟಿವ್ ಕೇಸ್ ಕಂಡುಬಂದಲ್ಲಿ ಮಾಸ್ಕ್ ಧರಿಸಬಹುದು,ಯಾವುದೆ ಪಾಸಿಟಿವ್ ಕೇಸ್ ಇಲ್ಲದೆಯು ಮಾಸ್ಕ್ ಧರಿಸುವ ಅವಶ್ಯವಿಲ್ಲ,ಶಾಲಾ ಮಕ್ಕಳಿಗು ಮಾಸ್ಕ್ ಧರಿಸುವಂತೆ ಹೇಳಲಾಗುತ್ತಿದೆ.ಮಾಸ್ಕ್ ಧರಿಸುವ ಅವಶ್ಯವಿಲ್ಲ,ಆದರು ಧರಿಸುತ್ತಿದ್ದಾರೆ ಎಂದರು.ಈಗಾಗಲೇ ಕೊರೊನಾ ಜಾಗೃತಿ ಕುರಿತು ಬ್ಯಾನರ್‌ಗಳನ್ನು ಹಾಕಿ,ಕರಪತ್ರಗಳ ಹಂಚಿ ಅರಿವು ಮೂಡಿಸಲಾಗುತ್ತಿದೆ.ನಗರಸಭೆಯ ವಾಹನಗಳಿಂದಲೂ ಧ್ವನಿವರ್ಧಕದ ಮೂಲಕ ಜಾಗೃತಿ ನಡೆಸಲು ನಗಸಭೆಗೆ ತಿಳಿಸಲಾಗಿದೆ,ನಾವು ರಾಜ್ಯ ಮತ್ತು ಕೇಂದ್ರ ಸರಕಾರಗಳ ಮಾರ್ಗಸೂಚಿಗಳಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಖಾಸಗಿ ವೈದ್ಯರುಗಳಾದ ಡಾ.ಅವಿನಾಶ ಕೆಂಭಾವಿ,ಡಾ.ಆಯುಶಾ ಅಂಜುಮ್,ಡಾ.ಮಹೇಶ ಪವಾರ್,ಡಾ;ಮಹ್ಮದ್ ಯಾಸಿನ್,ಡಾ.ಮಹ್ಮದ್ ಮುನಾವರ್,ಡಾ.ಅಮೃತಾ ನಾಯಕ, ಡಾ.ಕಿರಣಕುಮಾರ್, ಡಾ.ಪವನ್ ಕುಮಾರ ಜೋಷಿ, ಡಾ.ಆರ್.ಸಿ. ಅಂಡಗಿ, ಡಾ.ಎಂ.ಎಸ್. ಕನಕರಡ್ಡಿ, ಡಾ.ಶಿವರಾಜ ಬಿ.ಎಮ್,ಡಾ.ಸಯ್ಯದ್ ಮೀರ ಮಹ್ಮದಲಿ,ಡಾ. ಆರ್.ಆರ್.ಪಾಟೀಲ,ಡಾ. ಸತ್ಯನಾರಾಯಣ ಆಲದರ್ತಿ, ಡಾ.ಮುಕುಂದ ಯಾನಗುಂಟಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here