ಕಲಬುರಗಿಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭ ವಿಳಂಬಕ್ಕೆ ಶಾಸಕ ಖರ್ಗೆ ಆಕ್ರೋಶ

0
61

ಬೆಂಗಳೂರು: ಕಲಬುರಗಿಯಲ್ಲಿ ಕೊರೋನಾ ವೈರಸ್ ಪತ್ತೆಯ ಪರೀಕ್ಷಾ ಕೇಂದ್ರ ಸ್ಥಾಪನೆಗೆ ವಿಳಂಬವಾಗುತ್ತಿರುವುದರ ಕುರಿತು ಶಾಸಕರಾದ ಪ್ರಿಯಾಂಕ್ ಅವರು ಇಂದು ಸದನದಲ್ಲಿ ಪಶ್ನೆ ಕೇಳುವ ಮೂಲಕ ಸರಕಾರದ ಗಮನ ಸೆಳೆದರು.

ಜಿಲ್ಲೆಯಲ್ಲಿ ಈಗಾಗಲೇ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಾತ್ಮಕ ವಸ್ತುಗಳು ( Reagents) ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬರಗಿಗೆ ತರಬೇಕಿತ್ತು. ಆ ಕೆಲಸವೂ ಕೂಡಾ ಆಗಿಲ್ಲ ಇದು ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ.

Contact Your\'s Advertisement; 9902492681

ಕೊರೋನಾ ವೈರಸ್ ಹರಡದಂತೆ ತೆಗೆದುಕೊಂಡ ಕ್ರಮದ ಬಗ್ಗೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಜಂಟಿ‌ಟಾಸ್ಕ್ ಫೋರ್ಸ್ ರಚಿಸಬೇಕು. ಆ ಮೂಲಕ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ, ಮದುವೆ ಜಾತ್ರೆಗಳು ಸೇರಿದಂತೆ ಜಾಸ್ತಿ ಜನ ಸೇರುವ ಸಮಾರಂಭಗಳು ಇನ್ನೂ ನಡೆಯುತ್ತಿವೆ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಸರಕಾರಕ್ಕೆ ಆಗ್ರಹಿಸಿದರು.

ಕೊರೋನ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟು ಐದು ದಿನ ಕಳೆದರು ಕಲಬುರಗಿಯಲ್ಲಿ ಸೋಂಕು ಪತ್ತೆ ಪರೀಕ್ಷಾ ಕೇಂದ್ರ ಮಾಡಲಾಗಿಲ್ಲ. ರಾಜ್ಯದಿಂದ ೨೫ ಬಿಜೆಪಿ‌ ಸಂಸದರು, ಸಂಪೂರ್ಣ ಬಹುಮತದ ಸರಕಾರ ರಾಜ್ಯದಲ್ಲಿ ಇದ್ದಾಗ್ಯೂ ಕೂಡಾ ಪರೀಕ್ಷಾ ಕೇಂದ್ರ ಸ್ಥಾಪಿಸಿಲ್ಲ, ಪ್ರಕ್ರಿಯಾತ್ಮಕ ವಸ್ತುಗಳು ದೆಹಲಿಯಿಂದ ಕಲಬುರಗಿ ಕಳಿಸಲು ಇದುವರೆಗೂ ಕಳಿಸಲಾಗಿಲ್ಲ ಎಂದು ಸರಕಾರದ‌ ವಿಳಂಬ ಧೋರಣೆ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here