ಸುರಪುರ: ಭಾವಪೂರ್ಣ ಶ್ರದ್ಧಾಂಜಲಿ ಸಭೆ ಕನ್ನಡ ಸಾಹಿತ್ಯ ಪರಿಷತ್ತು ಸುರಪುರ ವತಿಯಿಂದ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಲಿಂಗೈಕ್ಯ ನಾಡೋಜ ಪಾಟೀಲ ಪುಟ್ಟಪ್ಪನವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆರಂಭದಲ್ಲಿ ಪಾಪುರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ವಕೀಲ ನಿಂಗಣ್ಣ ಚಿಂಚೋಡಿ ಮಾತನಾಡಿ, ನಾಡು ಕಂಡ ಮಹಾನ್ ಚೇತನ ಪಾಟೀಲ ಪುಟ್ಟಪ್ಪನವರು, ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದಾರೆ. ನೇರ ನುಡಿ ಪ್ರಾಮಾಣಿಕ ರಾಗಿರುವುದರಿಂದ ಅವರು ನಿರ್ಭೀತರಾಗಿ ತಮ್ಮ ಅಭಿವ್ಯಕ್ತಿಯನ್ನು ಪ್ರಸ್ತುತ ಪಡಿಸುತ್ತಿದ್ದರು. ಪತ್ರಿಕಾ ಕ್ಷೇತ್ರದಲ್ಲಿ ಅನೇಕ ಯುವ ಬರಹಗಾರರಿಗೆ ಮಾರ್ಗದರ್ಶಕರಾಗಿದ್ದರು ಎಂದು ಅಭಿಪ್ರಾಯಪಟ್ಟರು .
ಸರ್ಕಾರದ ಆದೇಶದಂತೆ ಕಾರ್ಯಕ್ರಮವನ್ನು ಸರಳ ರೀತಿಯಾಗಿ ಆಚರಿಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಶ್ರೀನಿವಾಸ್ ಜಾಲವಾದಿ ಜಮದರಖಾನಿ ನಬಿಲಾಲ್ ಮಕಾಂದಾರ್ ಬಸವರಾಜ್ ದೇಶ್ ಮುಖ್ ಆರ್ ಕೆ ಕೋಡಿಹಾಳ ರಾಘವೇಂದ್ರ ಭಕ್ರಿ ಇಕ್ಬಾಲ್ ರಾಹಿ ಸೋಮರೆಡ್ಡಿ ಮಂಗಿಹಾಳ ರಾಜಶೇಖರ ದೇಸಾಯಿ ಬಸವರಾಜ ರುಮಾಲ್ ಶಿವಕುಮಾರ್ ಮಸ್ಕಿ ಮಹಾದೇವಪ್ಪ ಗುತ್ತೇದಾರ್ ಕುತ್ಬುದ್ದೀನ್ ಅಮ್ಮಾಪುರ ಅನ್ವರ್ ಜಮಾದಾರ ರಾಘವೇಂದ್ರ ಬಾಡಿಯಾಳ ದೇವು ಹೆಬ್ಬಾಳ ನಿರೂಪಿಸಿ ವಂದಿಸಿದರು.