ಸಾಹಿತ್ಯ ಲೋಕದ ಧ್ರುವತಾರೆ ಪಾಪು

0
153

ಶಹಾಬಾದ: ಪಾಟೀಲ ಪುಟ್ಟಪ್ಪನವರು ಸರಳ ಹಾಗೂ ನೇರ ನುಡಿಯ ವ್ಯಕ್ತಿತ್ವದ ಜತೆಗೆ ಸಾಹಿತ್ಯ,ಹೋರಾಟ ಮತ್ತು ಪತ್ರಿಕಾ ರಂಗ ಹೀಗೆ ಹತ್ತಾರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆಗೈದ ಸಾಹಿತ್ಯ ಲೋಕದ ಧ್ರುವತಾರೆಯಾಗಿ ಮೆರೆದವರು ಎಂದು ಕಸಾಪ ಕಲಬುರಗಿ ಗ್ರಾಮೀಣ ವಲಯದ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ನಗರದ ಕನ್ನಡ ಭವನದಲ್ಲಿ ಬುಧವಾರ ಕಸಾಪ ನಗರ ಘಟಕದ ವತಿಯಿಂದ ಆಯೋಜಿಸಲಾದ ಪಾಟೀಲ ಪುಟ್ಟಪ್ಪನವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಹಿರಿಯ ಚೇತನ ಪಾಪು ಅವರು ನೂರು ವರ್ಷಗಳ ಕಾಲ ಕನ್ನಡದ ಧ್ವನಿಯಾಗಿ, ಪತ್ರಕರ್ತರಾಗಿ ನಾಡು,ನುಡಿ, ನೆಲದ ಹಾಗೂ ಜಲದ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಕನ್ನಡಕ್ಕೆ ಅನನ್ಯ ಸೇವೆ ಸಲ್ಲಿಸಿದ್ದರು. ವಾಸ್ತವವಾದಿ ಮತ್ತು ನಿಷ್ಠುರವಾದಿಯಾಗಿದ್ದ ಅವರು ಎಂದಿಗೂ ಹಿಡಿದ ಹಟ ಸಾಧಿಸುವವರೆಗೂ ಬಿಡುತ್ತಿರಲಿಲ್ಲ. ಅಂತಹ ಮಹಾನ ವ್ಯಕ್ತಿಯ ನಿಧನದಿಂದ ನಾಡಿನ ಸಾಹಿತ್ಯ ಹಾಗೂ ಪತ್ರಿಕಾ ರಂಗಕ್ಕೆ ಅಘಾತವಾಗಿದೆ ಎಂದು ಹೇಳಿದರು.

ಕಸಾಪ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಪಾಪು ಅವರ ಸಾಹಿತ್ಯ ಬರವಣಿಗೆ ಹರಿತವಾಗಿದ್ದವು.ಸರ್ಕಾರ ಎಚ್ಚೆತ್ತುಕೊಳ್ಳುವ ರೀತಿ ಅವರ ಮಾತಿನ ಚಾಟಿಯನ್ನು ಬೀಸುತ್ತಿದ್ದರು.ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ಅಪ್ರತಿಮ ದೇಶಭಕ್ತ ಪಾಪು ಅವರ ನಡೆ,ನುಡಿ ಎಲ್ಲರಿಗೂ ಆದರ್ಶಮಯ ಎಂದು ಹೇಳಿದರು.

ಅರುಣ ಜಾಯಿ,ಶಾಂತಪ್ಪ ಹಡಪದ, ರವಿ ಬೆಳಮಗಿ, ಬಸವರಾಜ, ಸುಧೀರ ಕುಲಕರ್ಣಿ, ರಮೇಶ ಜೋಗದನಕರ್ ಸೇರಿದಂತೆ ಅನೇಕ ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here