ನಾಡೋಜ ಪಾಟೀಲ್ ಪುಟ್ಟಪ್ಪಗೆ ಸುರಪುರ ಕಸಾಪದಿಂದ ಶ್ರದ್ಧಾಂಜಲಿ

0
44

ಸುರಪುರ: ಇತ್ತೀಚೆಗೆ ನಿಧನರಾದ ನಾಡಿನ ಖ್ಯಾತ ಪತ್ರಕರ್ತ,ಕನ್ನಡದ ಕಟ್ಟಾಳು ನಡೋಜ ಡಾ. ಪಾಟೀಲ್ ಪುಟ್ಟಪ್ಪನವರಿಗೆ ಕನ್ನಡ ಸಾಹಿತ್ಯ ಪರಿಷತ್ ಸುರಪುರ ತಾಲೂಕು ಘಟಕದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬುಧವಾರ ಸಂಜೆ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ ಮಾತನಾಡಿ,ಪಾಟೀಲ್ ಪುಟ್ಟಪ್ಪನವರು ಒಬ್ಬ ದಿಟ್ಟತನ ಪತ್ರಕರ್ತರು,ಯಾವುದೆ ಸಂಗತಿಯನ್ನು ಯಾವ ಮುಚ್ಚು ಮರೆಯಿಲ್ಲದೆ ನಿರ್ಭಿತಿಯಿಂದ ಬರೆಯುವ ಛಾತಿ ಅವರಲ್ಲಿತ್ತು.ಅಲ್ಲದೆ ಅವರೊಬ್ಬ ಎದೆಗಾರಿಕೆಯ ಹೊರಾಟಗಾರರು.ಅವರು ಸದಾಕಾಲ ಕನ್ನಡ ಮತ್ತು ಬಸವಣ್ಣ ನನ್ನ ಆಯ್ಕೆಗಳು ಎನ್ನುತ್ತಿದ್ದರು.ತಮ್ಮ ಜೀವಿತದ ಕೊನೆಯ ಗಳಿಗೆಯಲ್ಲು ಕಪ್ಪತಗುಡ್ಡದ ಹೋರಾಟದ ಧ್ವನಿಯನ್ನು ಎತ್ತಿದವರು.ಅಂತಹ ಮಹಾನ್ ಮುತ್ಸದ್ಧಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದರು.

Contact Your\'s Advertisement; 9902492681

ಸಭೆಯ ಆರಂಭದಲ್ಲಿ ಪಾಪುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆಯ ಮೂಲಕ ಆತ್ಮಕ್ಕೆ ಶಾಂತಿ ಕೋರಲಾಯಿತು.ನಂತರ ಸಭೆಯ ಅಧ್ಯಕ್ಷತೆ ವಹಿಸಿ ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿಯವರು ಮಾತನಾಡಿದರು.

ಸಭೆಯಲ್ಲಿ ಬಸವರಾಜ ಜಮದ್ರಖಾನಿ,ನಬಿಲಾಲ ಮಕಾಂದಾರ,ಬಸವರಾಜಪ್ಪ ನಿಷ್ಠಿ ದೇಶಮುಖ, ಆರ್.ಕೆ. ಕೋಡಿಹಾಳ, ರಾಘವೇಂದ್ರ ಭಕ್ರಿ, ಇಕ್ಬಾಲ್ ರಾಹಿ,ಸೋಮರಡ್ಡಿ ಮಂಗಿಹಾಳ,ರಾಜಶೇಖರ ದೇಸಾಯಿ,ಬಸವರಾಜ ರುಮಾಲ, ಮಹಾದೇವಪ್ಪ ಗುತ್ತೇದಾರ,ಕುತ್ಬುದ್ದೀನ್ ಅಮ್ಮಾಪುರ,ಅನ್ವರ ಜಮಾದಾರ,ರಾಘವೇಂದ್ರ ಬಾಡಿಯಾಳ ಇದ್ದರು.ಕಸಾಪ ಕಾರ್ಯದರ್ಶಿ ದೇವು ಹೆಬ್ಬಾಳ ಸಭೆಯನ್ನು ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here