ಕಲಬುರಗಿ: ಕೊರೋನಾ ವೈರಸ್ ಭೂಮಿ ಮೇಲೆ ಕೇವಲ 10 ಗಂಟೆ ಜೀವತ ಇರಬಹುದು, ಇದರಿಂದ ಗಾಬರಿ ಪಡುವ ಅಗತ್ಯವಿಲ್ಲ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ವೃದ್ಧರು ಮನೆಯಿಂದ ಹೊರಗಡೆ ಓಡಾಡುವುದು ತಡೆಯಿರಿ. ಡಿಸಿ ನೀಡಿರುವ ಮುಂಜಾಗ್ರತಾ ಕ್ರಮ ಪಾಲಿಸಿ ಕೊರೋನಾದಿಂದ ದೂರ ಇರಬಹುದೆಂದು ಖಾಜಾ ಬಂದಾ ನವಾಜ್ ದರ್ಗಾದ ಪಿಠಾಧಿಪತಿ, ಕೆ.ಬಿ.ಎನ್ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಸೈಯದ್ ಶಾ ಖುಸ್ರೋ ಹುಸೈನಿ ಅವರು ಕರೆ ನೀಡಿದ್ದಾರೆ.
ನಿನ್ನೆ ರಾತ್ರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೆಮ್ಮು, ಜ್ವರ, ನೆಗಡಿ ಯಾವುದೇ ರೀತಿಯ ಆರೋಗ್ಯದಲ್ಲಿ ಏರುಪೇರು ಉಂಟಾದರೆ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮುಂದಾಗಿ, ಚಿಕಿತ್ಸೆ ಪಡೆದು ಗುಣಮುಖರಾಗುವುದು ಅಗತ್ಯ, ನಿರ್ಲಕ್ಷ್ಯ ತೊರಿದರೆ ಸಾರ್ವಜನಿಕರು ತೊಂದರೆಗೆ ಒಳಗಾಗತಂದೆ ಎಚ್ಚರವಹಿಸಿ ಎಂದರು.
ಈಗಾಲೇ ದರ್ಗಾದಲ್ಲಿ ಗುಂಪು ಗುಂಪಾಗಿ ಬರುವುದು ನಿಷೇಧಿಸಲಾಗಿದ್ದು, ದರ್ಗಾ ಒಳಗೆ ಪ್ರಾರ್ಥನೆ ಸಲ್ಲಿಸಿದ ತಕ್ಷಣ ಅಲ್ಲಿಂದ ತೆರಳಲು ತಕಿತು ಮಾಡಲಾಗಿದೆ, ದರ್ಗಾದಲ್ಲಿ ವೈರಸ್ ವಿರುದ್ಧ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ನಮಾಜ್ ಕುರಿತು ಉಲ್ಮಾಗಳೊಂದಿಗೆ ಚರ್ಚೆ ನಡೆಯುತ್ತಿದೆ. ಸ್ಥತಿಗತಿ ಅನುಗುಣವಾಗಿ ಜನರಿಗೆ ಮಾಹಿತಿ ನೀಡಲಾಗುವುದು, ನಮಾಜ್, ಕುರಾನ್ ಓದುವ ಮೂಲಕ ಮಾನವ ಜೀವನದ ರಕ್ಷಣೆಗೆ ದುವಾ ಮಾಡಲು ಸರ್ವರಲ್ಲಿ ಕೋರಿದ್ದಾರೆ.
ವಿದೇಶದಿಂದ ಬಂದವರು ಮನೆಯಿಂದ ಹೊರಗಡೆ ಬರಬೇಡಿ ಯಾರೊಂದಿಗೂ ಕೈ ಜೊಡಿಸಬೇಡಿ, ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಿ, ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದು, ಯಾರು ಸಹಾ ಅನಾವಶ್ಯಕ ಹೊರಗಡೆ ಬರದಿರಿ, ತನ್ನ ಮತ್ತು ಇತರರ ಸುರಕ್ಷೆಯ ಬಗ್ಗೆ ಕಾಳಜಿ ವಹಿಸಿ ಮನೆಯಲ್ಲೆ ಇರಿ ಹಾಗೂ ಜಿಲ್ಲಾಡಳಿತ ನಿರ್ದೇಶನವನ್ನು ಎಲ್ಲರು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.