ಕೊರೋನಾ ಭೀತಿ: ದಿನಬಳಕ್ಕೆ ವಸ್ತುಗಳ ಖರೀದಿಗೆ ಸಮಯ ನಿಗದಿಗೆ ದಸ್ತಿ ಆಗ್ರಹ

0
28

ಕಲಬುರಗಿ: ಜಿಲ್ಲೆಯ ನಾಗರಿಕರಿಗೆ ದಿನಬಳಕೆಯ ವಸ್ತುಗಳು ಪಡೆಯುವ ಕಾಲಮಿತಿಯ ಮತ್ತು ಬಡಾವಣೆವಾರು ಮಾರಾಟದಕ್ಕೆ ಗಡುವು ನೀಡಬೇಕೆಂದು ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳು ಸ್ವಾಗತಾರ್ಹ ಇದಕ್ಕೆ ಪೂರಕವಾಗಿ ಕಲಬುರಗಿ ನಾಗರಿಕರಿಗೆ ದಿನಸಿ ಬಳಕೆ ವಸ್ತುಗಳಾದ ಕಿರಾಣಾ  ಸಾಮಗ್ರಿ ಗಳು ಆಯಾ ಬಡಾವಣೆ ಕಿರಾಣಾ  ಅಂಗಡಿಗಳಲ್ಲಿ,  ಡಿಪಾರ್ಟ್ ಮೆಂಟಲ್ ಸ್ಟೋರಗಳಲ್ಲಿ ಸಾಯಂಕಾಲ 4ರಿಂದ  5ವರೆಗೆ ಮತ್ತು ತರಕಾರಿ ವ್ಯವಸ್ಥೆಗೆ ಬಡಾವಣೆವಾರು ನಾಲ್ಕು ಚಕ್ರ ಗಾಡಿಯಲ್ಲಿ ಇಲ್ಲವೆ ಆಯಾ ಬಡಾವಣೆಯಲ್ಲಿ ಒಂದು ಬಿಂದು ಗುರುತು ಮಾಡಿ ಮುಂಜಾನೆ 8 ರಿಂದ 10 ಗಂಟೆಯವರೆಗೆ ಸಮಯ ನಿಗದಿ ಮಾಡಿ ನಾಗರಿಕರಿಗೆ  ತರಕಾರಿ  ಸಾಮಗ್ರಿಗಳ ವ್ಯವಸ್ಥೆ ಮಾಡಿ ಅನುಕೂಲ ಕಲ್ಪಸಿಬೇಕೆಂದು ತಿಳಿಸಿದ್ದಾರೆ.

Contact Your\'s Advertisement; 9902492681

ನಿಗದಿತ ಸಮಯದಲ್ಲಿ ವ್ಯವಹಾರ ಮುಗಿಯುವದರಿಂದ ನಾಗರಿಕರಿಗೂ ಮತ್ತು ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳಿಗೂ ಸಹಕಾರಿಯಾವ ರೀತಿ ಜಿಲ್ಲಾಡಳಿತ ಕ್ರಮ ಕೈಗೊಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here