ಸ್ಕಾಟ್ಲ್ಯಾಂಡ್‌ನಲ್ಲಿ ಕನ್ನಡ ಸಂಘದ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕನ್ನಡಿಗ ಪ್ರಸಾದ

0
43

ಸುರಪುರ: ಕೊರೊನಾ ವೈರಸ್‌ಗೆ ಹೆದರಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ. ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.ಇವರಲ್ಲಿ ಅನೇಕರು ಕೋವಿಡ್-೧೯ ಸೋಂಕು ಪೀಡಿತರಾಗಿದ್ದಾರೆ. ಇವರಿಂದಲೆ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ತಮ್ಮ ಪಾಲಕರ, ಸಂಬಂಧಿಕರ ಒತ್ತಾಯದಿಂದಲೂ ಅನೇಕರು ಭಾರತಕ್ಕೆ ವಾಪಾಸಾಗಿದ್ದಾರೆ.

ಸಧ್ಯ ವಿದೇಶದಿಂದ ಬರುವವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿದೆ. ಬಂದ ತಕ್ಷಣವೇ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ ಕಾಣಿಸುತ್ತಿದೆ. ಸ್ವದೇಶಕ್ಕೆ ಕಾಲಿಟ್ಟ ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಇದು ಕುಟುಂಬ ಸದಸ್ಯರಿಗೂ ತೊಂದರೆಗೆ ದೂಡುತ್ತದೆ.

Contact Your\'s Advertisement; 9902492681

ಇದನ್ನು ಮನಗಂಡ ಸುರಪುರದ ಪ್ರಸಾದ ಸಾಲವಾಡಗಿ ತಾವು ಕೆಲಸ ನಿರ್ವಹಿಸುತ್ತಿರುವ ಸ್ಕಾಟ್‌ಲ್ಯಾಂಡ್ ದೇಶದ ರಾಜಧಾನಿ ಎಡಿನ್ಬರ್ಗ್ ನಗರದಲ್ಲಿ ಉಳಿಯಲು ನಿರ್ಧರಿಸಿ ಗಟ್ಟಿತನ, ಸ್ವದೇಶ ಪ್ರೇಮ ಮೆರೆದಿದ್ದಾರೆ.
ಬೆಂಗಳೂರಿನ ಸಿಜಿಐ ಕಂಪನಿ ವತಿಯಿಂದ ಎಡಿನ್ಬರ್ಗ್‌ನ ಸರ್ಕಾರಿ ಸಂಸ್ಥೆ ಎ.ಎಫ್.ಆರ್.ಸಿ.ಯಲ್ಲಿ ೨೦೧೪ ರಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಪ್ರಸಾದ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಶಾಲಿನಿ, ಪುತ್ರ ಸುಶಾಂತನೊಂದಿಗೆ ಅಲ್ಲಿ ವಾಸಿಸುತ್ತಿದ್ದಾರೆ.

ಕೊರೊನಾದಿಂದ ವಿಶ್ವವೇ ತತ್ತರಿಸಿದೆ. ಇದಕ್ಕೆ ಸ್ಕಾಟ್‌ಲ್ಯಾಂಡ್ ಕೂಡಾ ಹೊರತಾಗಿಲ್ಲ. ಭಾರತಕ್ಕೆ ಮರಳಿದರೆ ಪ್ರಯಾಣದ ಸಂದರ್ಭದಲ್ಲಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಲ್ಲಿಯೇ ಉಳಿದಿದ್ದೇನೆ. ಭಾರತೀಯರ ಆಶೀರ್ವಾದ ನನ್ನ ಮೇಲಿದೆ.  – ಪ್ರಸಾದ ಸಾಲವಾಡಗಿ, ಎಂಜಿನಿಯರ್

ಸಂಬಂಧಿಕರ ಒತ್ತಡ: ಕೊರೊನಾ ಬಗ್ಗೆ ಆತಂಕಗೊಂಡು ಸುರಪುರದಿಂದ ಪ್ರಸಾದ ಅವರ ಕುಟುಂಬಸ್ಥರು ಮತ್ತು ಶಹಾಪುರದಿಂದ ಶಾಲಿನಿ ಅವರ ಕುಟುಂಬಸ್ಥರು ಕರೆ ಮಾಡಿ ಸ್ವದೇಶಕ್ಕೆ ವಾಪಾಸ್ ಬರುವಂತೆ ಒತ್ತಾಯಿಸುತ್ತಲೇ ಇದ್ದಾರೆ. ಎಡಿನ್ಬರ್ಗ್‌ನಲ್ಲೆ ಉಳಿಯಲು ಗಟ್ಟಿ ನಿರ್ಧಾರ ಮಾಡಿರುವ ಪ್ರಸಾದ ತಮ್ಮ ಮತ್ತು ಪತ್ನಿಯ ಕುಟುಂಬಸ್ಥರಿಗೆ ನಾವು ಇಲ್ಲಿ ಜಾಗರೂಕತೆಯಿಂದ ಇರುತ್ತೇವೆ. ನೀವು ಜಾಗ್ರತೆಯಿಂದ ಇರಿ ಎಂದು ಧೈರ್ಯ ಹೇಳುತ್ತಿದ್ದಾರೆ. ಈಚೆಗೆ ಕನ್ನಡ ಅಸೋಸಿಯೇಶನ್ ಆಫ್ ಸ್ಕಾಟ್‌ಲ್ಯಾಂಡ್ ಸಂಘವನ್ನು ಸಮಾನ ಮನಸ್ಕರೊಂದಿಗೆ ಆರಂಭಿಸಿರುವ ಪ್ರಸಾದ ಕನ್ನಡ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿರುವ ಕನ್ನಡಿಗರಿಗೆ ಕರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಭೀತಿಯಿಂದ ಸಾಕಷ್ಟು ವಿದೇಶಿಯರು ಭಾರತಕ್ಕೆ ಮರಳುತ್ತಿದ್ದಾರೆ. ಸೋಂಕನ್ನು ತಂದು ಹರಡುತ್ತಿದ್ದಾರೆ. ತಮ್ಮ ಕುಟುಂಬದವರಿಗೂ ದೇಶಕ್ಕೂ ಸಮಸ್ಯೆಯೊಡ್ಡುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿ ಅರಿತು ಎಡಿನ್ಬರ್ಗ್‌ನಲ್ಲಿ ಉಳಿದಿರುವ ಪ್ರಸಾದ ವಿದೇಶದಿಂದ ಬರುವವರಿಗೆ ಮಾದರಿಯಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here