ನವ ದೆಹಲಿ: ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೋವಿಡ್ -19 ನಿಯಂತ್ರಿಸುವ ಮತ್ತು ದೇಶವನ್ನೇ ಲಾಕ್‌ಡೌನ್ ಮಾಡಲಾಗಿರುವ ಕ್ರಮದಿಂದಾಗಿ ನಷ್ಟ ಅನುಭವಿಸಲಿರುವ ಮಧ್ಯಮ ಮತ್ತು ಕೆಲ ವರ್ಗದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೊನೆಗೂ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.
ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಯೊಬ್ಬರಿಗೆ ಮುಂದಿನ 3 ತಿಂಗಳು 5 ಕೆಜಿ ಅಕ್ಕಿ ಅಥಾವ ಗೋಧಿಯನ್ನು, ಇದರೊಂದಿಗೆ ಬೇಳೆ ಉಚಿತವಾಗಿ ನೀಡಲಾಗುವುದು ಅಂತ ಹೇಳಿದರು. ಈ ಯೋಜನೆಯಿಂದ ದೇಶದ 80 ಕೋಟಿ ಜನತೆ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಅಂತ ಹೇಳಿದರು.
ಪ್ಯಾಕೇಜ್ ಘೋಷಣೆಯ ಹೈಲೆಟ್ಸ್
- 8.69 ಕೋಟಿ ರೈತರಿಗೆ ನೇರ ನಗದು ವರ್ಗಾವಣೆಯ ಮೂಲಕ ರೂ. 2000 ರ ಹಣ ವರ್ಗಾವಣೆ, ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಕಂತು.
- 3 ಕೋಟಿ ಬಡ ಹಿರಿಯ ನಾಗರಿಕ, ಬಡ ವಿಧವೆಯರು ಮತ್ತು ಬಡ ಅಂಗವಿಕಲರಿಗೆ ರೂ1,000 ಪಿಂಚಣಿ.
- ಉಜ್ಜಾವಲಾ ಯೋಜನೆಯಡಿ ಮಹಿಳೆಯರಿಗೆ 3 ತಿಂಗಳವರೆಗೆ ಉಚಿತ ಸಿಲಿಂಡರ್.
- ಮುಂದಿನ ತಿಂಗಳು ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಇಪಿಎಫ್ ಕೊಡುಗೆ.
- 63 ಲಕ್ಷ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ರೂ. 20 ಲಕ್ಷದ ತನಕ ಸಾಲ.
- ಮಹಿಳಾ ಜನ ಧನ್ ಖಾತೆ ಹೊಂದಿರುವವರಿಗೆ ಮನೆ ನಡೆಸಲು 3 ತಿಂಗಳವರೆಗೆರೂ. 500 ಎಕ್ಸ್ ಗ್ರೇಟಿಯಾ.
- ಪ್ರತಿಯೊಬ್ಬ ಎಂಎನ್‌ಆರ್‌ಇಜಿಎ ಕೆಲಸಗಾರನಿಗೆ ರೂ. 2,000 ಹೆಚ್ಚಳ.
- ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ, 3.5 ಕೋಟಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಪರಿಹಾರ ಒದಗಿಸಲು ನಿಧಿಯನ್ನು (31,000 ಕೋಟಿ ರೂ.) ಬಳಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.
- ವೈದ್ಯಕೀಯ ಪರೀಕ್ಷೆ ಮತ್ತು ತಪಾಸಣೆ ಮತ್ತು ಆರೋಗ್ಯದ ಗಮನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಬಳಿ ಇರುವ 31 ಸಾವಿರ ಕೋಟಿ ಹಣವನ್ನು ಬಳಕೆಗೆ ಮನವಿ.
- ಇನ್ನು ಸೀತಾರಾಮನ್ ಮಂಗಳವಾರ ಆದಾಯ ತೆರಿಗೆ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ವಿಸ್ತರಿಸಿದ್ದರು, ಇದಲ್ಲದೇ ಇತರ ಬ್ಯಾಂಕುಗಳ ಎಟಿಎಂನಿಂದ ಹಣವನ್ನು ಹಿಂಪಡೆಯುವ ಶುಲ್ಕವನ್ನು ಮನ್ನಾ ಮಾಡಿರುವುದಾಗಿ ತಿಳಿಸಿದರು.