ನಾಳೆಯಿಂದ ಮನೆ ಮನೆಗೆ ತರಕಾರಿ: ಸಿಪಿಐ ಪಂಚಾಕ್ಷರಿ ಸಾಲಿಮಠ್

0
835

ಚಿತ್ತಾಪುರ: ಕೊರೊನಾ(ಕೋವಿಡ್ 19) ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ವಾರ್ಡಗಳ ಮತ್ತು ಹಳ್ಳಿಗಳ ವ್ಯಾಪ್ತಿಯ ಸಾರ್ವಜನಿಕರಿಗೆ ನಾಳೆಯಿಂದ ಮನೆ ಮನೆಗೆ ತರಕಾರಿ ಮಾರಾಟಕ್ಕೆ ಕ್ರಮ ಜರುಗಿಸಲಾಗುತ್ತಿದೆ ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ್ ತಿಳಿಸಿದರು.

ಪುರಸಭೆ ವಾರ್ಡಗಳ ಮತ್ತು ಹಳ್ಳಿಗಳ ವ್ಯಾಪ್ತಿಯ ವ್ಯಾಪ್ತಿಯ ತರಕಾರಿ ಮಾರುಕಟ್ಟೆಗಳಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದ್ದು, ಇದರಿಂದ ವೈರಸ್ ತಗಲುವ ಭೀತಿಯಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ನಗರದ ತರಕಾರಿ ಮಾರುಟ್ಟೆಗಳನ್ನು ಬಂದ ಮಾಡಲಾಗುತ್ತಿದ್ದು.

Contact Your\'s Advertisement; 9902492681

ಪುರಸಭೆ ವಾರ್ಡಗಳ ಮತ್ತು ಹಳ್ಳಿಗಳ ವ್ಯಾಪ್ತಿಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಳೆಯಿಂದ ತರಕಾರಿಗಳನ್ನು ವಾರ್ಡವಾರು ತಳ್ಳು ಗಾಡಿಗಳ ಅಥವಾ ಅವರಿಗೆ ಅನುಕೂಲವಾಗುವ ಮುಖಾಂತರ ಮನೆ ಮನೆಗೆ ಮಾರಾಟ ಮಾಡಲು ಅನುಮತಿ ನೀಡಿ ವರ್ತಕರು, ವ್ಯಾಪಾರಸ್ಥರು ಸಾಮಾಜಿ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ವ್ಯಾಪಾರ ಮಾಡುವಂತೆ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here