ಕೇಂದ್ರದ ಪ್ಯಾಕೇಜ್‌ಗೆ ಶಾಸಕ ಗುತ್ತೇದಾರ ಸ್ವಾಗತ

0
35

ಆಳಂದ: ಕೊರೋನಾ ವೈರಸನಿಂದ ತೀವ್ರ ಆರ್ಥಿಕ ಹೊಡೆತ ಅನುಭವಿಸುತ್ತಿರುವ ಭಾರತದ ಮಧ್ಯಮ ವರ್ಗದ ಜನತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ವಿಶೇಷ ಪ್ಯಾಕೇಜನ್ನು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಸ್ವಾಗತಿಸಿದ್ದಾರೆ.

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶವು ೨೧ ದಿನಗಳ ಲಾಕಡೌನನ ೨ನೇ ದಿನ ಆಗುತ್ತಿದ್ದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶೇಷ ಆರ್ಥಿಕ ಪ್ಯಾಕೇಜ್‌ನ್ನು ಘೋಷಿಸಿದ್ದಾರೆ ಇದರಿಂದ ದೇಶದ ಬಡ ಜನತೆಗೆ ಮತ್ತು ಮಧ್ಯಮ ವರ್ಗದ ಜನತೆಗೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಗರೀಬ್ ಕಲ್ಯಾಣ ಯೋಜನೆಯಲ್ಲಿ ಮೀಸಲಿಟ್ಟಿರುವ ೧.೭೦ ಸಾವಿರ ಕೋಟಿಯನ್ನು ಈ ಸಂದರ್ಭದಲ್ಲಿ ಬಳಸಲಾಗುವುದು. ವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ೫೦ ಲಕ್ಷ ವಿಮೆ ಜಾರಿ, ಪ್ರತಿಯೊಬ್ಬರಿಗೆ ಮುಂದಿನ ಮೂರು ತಿಂಗಳು ೫ ಕೆಜಿ ಅಕ್ಕಿ ಅಥವಾ ಗೋಧಿ ಇದರೊಂದಿಗೆ ಉಚಿತವಾಗಿ ಬೆಳೆ ನೀಡುವುದು ಈ ಯೋಜನೆಯಿಂದ ದೇಶದ ೮೦ ಕೋಟಿ ಜನತೆಗೆ ಲಾಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

೩ ಕೋಟಿ ಬಡ ಹಿರಿಯ ನಾಗರಿಕ, ವಿಧವೆಯರು ಮತ್ತು ಅಂಗವಿಕಲರಿಗೆ ೧೦೦೦ ಸಾವಿರ ರೂ. ಪಿಂಚಣಿ, ಉಜ್ವಲಾ ಯೋಜನೆಯಡಿ ಮಹಿಳೆಯರಿಗೆ ೩ ತಿಂಗಳು ಉಚಿತ ಸಿಲಿಂಡರ್, ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ೨೦೦೦ ಸೇರಿದಂತೆ ಅನೇಕ ಜನೋಪಯೋಗಿ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಅದಕ್ಕಾಗಿ ಕೇಂದ್ರ ಸರ್ಕಾರವನ್ನು, ಪ್ರಧಾನಮಂತ್ರಿಗಳನ್ನು ಹಾಗೂ ಹಣಕಾಸು ಸಚಿವರನ್ನು ಅಭಿನಂದಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here