ಆಳಂದ: ಕೇಂದ್ರ ಸರ್ಕಾರವು ಕೊರೋನಾ ತುರ್ತು ಸಂದರ್ಭದಲ್ಲಿ ದೇಶದ ಬಡವರ ನೆರವಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿರುವುದಕ್ಕೆ ಜಿ. ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಸ್ವಾಗತಿಸಿದ್ದಾರೆ.
ಕಿಸಾನ್ ಸಮ್ಮಾನ ಯೋಜನೆಯಡಿ ೮.೬೯ ಕೋಟಿ ರೈತರಿಗೆ ೨೦೦೦ ತಕ್ಷಣ ಖಾತೆಗೆ ಜಮೆ, ಸುಮಾರು ೫ ಕೋಟಿ ವೃದ್ಧರು,ವಿಧವೆಯರು ಅಂಗವಿಕಲರಿಗೆ ಮುಂದಿನ ೩ ತಿಂಗಳು ೧೦೦೦ ರೂ ಜಮೆ, ಎಲ್ಲಾ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮುಂದಿನ ೩ ತಿಂಗಳ ಉಚಿತವಾಗಿ ಗ್ಯಾಸ್ ವಿತರಣೆ, ಸ್ವಸಹಾಯ ಸಂಘಗಳಿಗೆ ನೆರವು, ತುರ್ತು ಸೇವೆದಾರರಿಗೆ ೫೦ ಲಕ್ಷ ನೆರವು, ಬಡವರಿಗೆ ಉಚಿತ ಪಡಿತರ ವಿತರಣೆ, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರಿಗೆ, ಪೌರ ಕಾರ್ಮಿಕರಿಗೆ ವಿಮೆ ಯೋಜನೆ, ಮನ್ರೆಗಾ ಕೂಲಿ ಕಾರ್ಮಿಕರಿಗೆ ಸಹಾಯಧನದ ಹೆಚ್ಚಳ ಸೇರಿದಂತೆ ಅನೇಕ ಕ್ರಮಗಳು ಜನರಿಗೆ ನೆಮ್ಮದಿಯನ್ನು ತರಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.