ಸುರಪುರ: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೊಂಕು ಹರಡದಂತೆ ಈಗಾಗಲೆ ಹಲವಾರು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ.
ಇಡೀ ರಾಜ್ಯವೆ ಲಾಕ್‌ಡೌನ್ ಆದೇಶ ಹೊರಡಿಸಲಾಗಿದೆ.ಇದರಿಂದ ರಾಜ್ಯಕ್ಕೆ ನಿತ್ಯವು ಸಾವಿರಾರು ಕೋಟಿ ರೂಪಾಯಿಗಳ ನಷ್ಟವುಂಟಾಗುತ್ತಿದ್ದು.ಇದರ ಜೊತೆಗೆ ಕೊರೊನಾ ತಡೆಗೆ ಮುಖ್ಯಮಂತ್ರಿಗಳು ಎರಡು ನೂರು ಕೋಟಿ ರೂಪಾಯಿಗಳ ಘೋಷಣೆ ಮಾಡಿದ್ದಾರೆ.ಜೊತೆಗೆ ಸಾರ್ವಜನಿಕರು ಧನ ಸಹಾಯ ಮಾಡಲು ಮನವಿ ಮಾಡಿದ್ದರ ಅಂಗವಾಗಿ ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ) ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨ ಲಕ್ಷ ರೂಪಾಯಿಗಳ ನೀಡುವ ಮೂಲಕ ನೆರವಾಗಿದ್ದಾರೆ.
ಚೆಕ್ ಪ್ರದರ್ಶಿಸಿದ ಶಾಸಕ ರಾಜುಗೌಡ ಮಾತನಾಡಿ,ಇಂದು ರಾಜ್ಯ ಮತ್ತು ದೇಶ ತೀವ್ರವಾದ ಸಂಕಷ್ಟದಲ್ಲಿದೆ ಕೊರೊನಾ ಎಂಬ ಮಹಾಮಾರಿ ದೇಶವನ್ನು ಬಾಧಿಸುತ್ತಿದೆ.ಇದನ್ನು ನಿರ್ಮೂಲನೆಗೊಳಿಸಲು ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕಾಗಿದೆ.ಅದರಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದರು.ಶಾಸಕರ ಈ ಸಹಕಾರಕ್ಕೆ ತಾಲೂಕಿನ ಜನರಿಂದ ಉತ್ತಮವಾದ ಪ್ರಶಂಸೆ ವ್ಯಕ್ತವಾಗಿದೆ.