ಶಾಸಕ ಪ್ರಿಯಾಂಕ್ ಖರ್ಗೆ ಮಹಾನಗರ ಪಾಲಿಕೆಗೆ ಸ್ವಚ್ಛತಾ ಕೆಮಿಕಲ್ ಸಲಕರಣೆ ವಿತರಣೆ

0
41

ಕಲಬುರಗಿ: ಕೊರೋನ ಸೋಂಕು ತಡೆಗೆ ನಗರ ಸ್ವಚ್ಛತೆಯಾಗಿಟ್ಟುಕೊಳ್ಳುವುದರ ಜೊತೆಗೆ ಸಾರ್ವಜನಿಕರು ಸರಕಾರ ವಿಧಿಸಿರುವ ನಿಬಂಧನೆಗಳನ್ನು ಪಾಲಿಸಬೇಕಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು ಈ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಮ್ಮಪ್ಪ ಕಮಕನೂರು ಸ್ವಚ್ಛತಾ ಕೆಮಿಕಲ್ ಹಸ್ತಾಂತರಿಸಿದರು.

ಮಹಾನಗರ ಪಾಲಿಕೆಗೆ ತಮ್ಮ ಹಾಗೂ ಜಿಲ್ಲಾ ಕಾಂಗ್ರೆಸ್ ವತಿಯಿಂದ  50 ಕ್ಯಾನ್ ನೆಲಹಾಸು ಸ್ವಚ್ಚಗೊಳಿಸುವ ಕೆಮಿಕಲ್‌( ಫ್ಲೋರ್ ಕ್ಲೀನಿಂಗ್ ), 1000 ಕೆಜಿ ಬ್ಲೀಚಿಂಗ್ ಪೌಡರ್ ಹಾಗೂ ಪೌರಕಾರ್ಮಿಕರ ಬಳಕೆಗಾಗಿ 5,000  ಕೈಗವಸುಗಳನ್ನು ನೀಡಿದ್ದಾರೆ.

Contact Your\'s Advertisement; 9902492681

ಸದರಿ ವಸ್ತುಗಳನ್ನು ಇಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಎಂ ಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಾ ಕಿರಣ್ ದೇಶಮುಖ್ ಅವರು‌ ಮಹಾನಗರ ಪಾಲಿಕೆಯ ಕಮೀಷನರ್  ರಾಹುಲ್ ಪಾಂಡ್ವೆ ಅವರಿಗೆ ಹಸ್ತಾಂತರಿಸಿದರು.

ರಾಜ್ಯಾದ್ಯಂತ ಕೊರೋನಾ ಸೋಂಕು ತನ್ನ ಕರಾಳ ಹಸ್ತ ಚಾಚುತ್ತಿದೆ.  ಈ ಸೋಂಕಿಗೆ ತುತ್ತಾಗಿ ಕಲಬುರಗಿಯ ವ್ಯಕ್ತಿಯೊಬ್ಬರು ಮೃತ ಹೊಂದಿದ್ದಾರೆ. ಜೊತಗೆ ಕುಟುಂಬದ ಸದಸ್ಯರಿಗೆ ಹಾಗೂ ಮೊದಲಿಗೆ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರಿಗೂ ಸೋಂಕು ತಗುಲಿದ್ದು ದುರದೃಷ್ಟಕರ.  ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೋಂಕು ಹರಡದಂತೆ ಇಂದಿಗೂ ಶ್ರಮವಹಿಸುತ್ತಿವೆ ಎಂದು ಅವರು ಪ್ರಶಂಸಿದರು.

ಸೋಂಕು ಹರಡದಂತೆ ತಡೆಯಲು ಎಲ್ಲರೂ ಮನೆಯಲ್ಲಿಯೇ ಇದ್ದು ಸಹಕರಿಸಬೇಕೆಂದು ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here