ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಅಂತರ್‍ವಾಣಿ 90.8 ಸಮುದಾಯ ರೇಡಿಯೋ ಕೇಂದ್ರವು ಕಳೆದ 10 ವರ್ಷಗಳಿಂದಲೂ ಸಮುದಾಯಕ್ಕೆ ಹಿತವಾಗುವ ಸಮುದಾಯದ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳನ್ನು ದಿನಕ್ಕೆ 10 ಗಂಟೆಗಳಂತೆ ನೀಡುತಾ ಬಂದಿದೆ. ಕೊರೋನಾ ಭೀತಿ ಕಾಡುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ಮತ್ತಿತರ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಅಂತರ್‍ವಾಣಿ ಸಮುದಾಯ ರೇಡಿಯೋ ಕೇಂದ್ರದ ಮೂಲಕ ಕೊರೋನಾ ವೈರಸ್‍ನ ಅಪಾಯ ತಡೆಗಟ್ಟುವ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಈ ಸಮುದಾಯ ರೇಡಿಯೋ ಕೇಂದ್ರದ ಮೂಲಕ ನೀಡಬೇಕೆಂದು ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸಲಾಗಿದೆ.
ಪ್ರತಿನಿತ್ಯ ಸಾಯಂಕಾಲ 5.30 ರಿಂದ 7 ಗಂಟೆಗೆ ನೇರಪೋನ್ ಇನ್ ಕಾರ್ಯಕ್ರಮ ಇರುತ್ತದೆ. ದೂರವಾಣಿ ಸಂಖ್ಯೆ 08472-273556, ಜನಜಾಗೃತಿಗೆ ಸಂಬಂಧಪಟ್ಟಂತೆ ನಾವು ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ತಾವು ಕರೆ ಮಾಡಿ ಸಂದೇಶವನ್ನು ನೀಡಬಹುದಾಗಿದೆ ಅಥವಾ ಅಧಿಕಾರಿಗಳು ಅನುಮತಿ ಕೊಟ್ಟರೆ ನಾವೇ ತಮ್ಮ ಬಳಿಗೆ ಬಂದು ತಮ್ಮ ಸಂದೇಶ, ಜನಜಾಗೃತಿ ಮಾಹಿತಿ ಮುಂತಾದವುಗಳನ್ನು ಧ್ವನಿ ಮುದ್ರಿಸಿಕೊಳ್ಳುತ್ತೇವೆ.
ಸಮುದಾಯದ ಹಿತಕ್ಕಾಗಿ ಈ ಸಮುದಾಯ ರೇಡಿಯೋವನ್ನು ಪರಿಣಾಮಕಾರಿಯಾಗಿ ತಾವು ಬಳಸಿಕೊಳ್ಳಬೇಕೆಂದು ಕೇಂದ್ರದ ನಿರ್ದೇಶಕರಾದ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಮತ್ತು ಕಾರ್ಯಕ್ರಮ ನಿರ್ವಾಹಕರಾದ ಕೃಪಾಸಾಗರ ಗೊಬ್ಬುರ ವಿನಂತಿಸಿಕೊಂಡಿದ್ದಾರೆ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ 9448882050, 9663466710.