ಕಲಬುರಗಿ: ನರಿಬೋಳ ಗ್ರಾಮದಲ್ಲಿಂದು ಬೆಂಗಳೂರು ಸೇರಿ ನಗರ ಪ್ರದೇಶಗಳಿಂದ ಬಂದಿರುವವರ ಮನೆ-ಮನೆಗೆ ತೆರಳಿ ವೈದ್ಯರು ಹಾಗೂ ಪಂಚಾಯತ್ ಟಾಸ್ಕ ಪೊರ್ಸ್ ವತಿಯಿಂದ ಜನತೆಗೆ ಕೊರೋನಾ ಸೋಂಕಿನ ಪರೀಕ್ಷೆ ನಡೆಸಲಾಯಿತು. 14 ದಿನಗಳು ಮನೆಯಲ್ಲೇ ಇರಬೇಕು ಹೊರಗಡೆ ಬರಬಾರದು ಎಂದು ತಾಕೀತು ಮಾಡಲಾಯಿತು.
ಗ್ರಾಮದಲ್ಲಿ ಕೊರೊನ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮನೆಗಳಿಂದ ಹೊರಬರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಉಚಿತವಾಗಿ #ಮಾಸ್ಕ್ ವಿತರಣೆ ಮಾಡಲಾಯಿತು. ದೊಡ್ಡಪ್ಪಗೌಡ ಪಾಟೀಲ್ ಮಾಜಿ ಶಾಸಕರು ಎಂ ಎಸ್ ಪಾಟೀಲ್ ನರಿಬೋಳ ಗೌರವಾಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಬಸವರಾಜ್ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶರಣಪ್ಪ ಹರನುರ್ ಗ್ರಾಮ ಪಂಚಾಯತ್ ಅಧ್ಯಕ್ಷರು ವೀರೇಶ್ ಪಾಟೀಲ್ ಶಿವಕುಮಾರ್ ಪಾಟೀಲ್ ಇನ್ನಿತರರಿದ್ದರು.