ಚಿತ್ತಾಪುರ: ಪಟ್ಟಣದಲ್ಲಿ ಕೊರೊನ್ ವೈರಸ್ ನಿಯಂತ್ರಣದಲ್ಲಿ ತಮ್ಮ ಜೀವನದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆರೋಗ್ಯ, ಪೊಲೀಸ್, ಪೌರಕಾರ್ಮಿಕರಿಗೆ, ಕಂದಾಯ ಇಲಾಖೆ ಸಿಬ್ಬಂದಿಗಳಿಗೆ, ಪತ್ರಕರ್ತರಿಗೆ ಹಾಗೂ ಗ್ರಾಹಕರಿಗೆ ಉಚಿತವಾಗಿ 300 ಮಾಸ್ಕ್ ಹಾಗೂ ಸ್ಯಾನಿಟೈಜರ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ವಿತರಣೆ ಮಾಡಲಾಯಿತು ಎಂದು ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ನಿಜಮುದ್ದಿನ್ ಚಿಸ್ತಿ ತಿಳಿಸಿದ್ದಾರೆ.
ತಸಿಲ್ದಾರ್ ಉಮಾಕಾಂತ್ ಹಳ್ಳೆ, ಪುರಸಭೆಯ ಮುಖ್ಯಾಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಪಿಎಸ್ಐ ಶ್ರೀಶೈಲ್ ಅಂಬಾಟಿ, ಅವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಸಜ್ಜನ್ ಶೆಟ್ಟಿ, ಶಿವರಾಜ್ ಗುರುಮಿಟ್ಕಲ್, ಶಿವಕುಮಾರ್ ಸುನಾರ್, ಸೇರಿದಂತೆ ಇತರರಿದ್ದರು.