ಕಲಬುರಗಿ; ತಾಲೂಕಿನ ಸುಕ್ಷೇತ್ರ ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದ ಪಿಠಾಧಿಪತಿಗಳಾದ ಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು ಇವರ ಆದೇಶದ ಮೆರೆಗೆ ಏಪ್ರಿಲ್ ೫. ರಂದು ತಾಲೂಕಿನ ಸುಕ್ಷೇತ್ರ ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದ ನಡೆಯ ಬೇಕಿದ್ದ ಜಾತ್ರೆಯ ಹಾಗೂ ಅನೇಕ ಕಾರ್ಯಕ್ರಮದಲ್ಲಿ ಕರ್ನಾಟಕ ಆಂಧ್ರ ಮಹಾರಾಷ್ಟ್ರ ರಾಜ್ಯದ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿದ್ದರು.
ಇಂಥ ವೈಭವದ ಜಾತ್ರೆ ರದ್ದು ಗೊಳಿಸಲಾಗಿದೆ ಕಾರಣ ಕೊರೊನ ಸೋಂಕು ತಡೆಗಟ್ಟಲು ದೇಶದ ಜನರ ಒಳತಿಗಾಗಿ ಪ್ರಧಾನಿ ನರೇಂದ್ರ ಮೋದಿ, ಸಿಎಂ. ಬಿಎಸ್. ಯಡಿಯೂರಪ್ಪ ಅವರು ಮಾಡಿದ ಲಾಕ್ ಡೌನ್ ಆದೇಶ ಸರ್ವರು ಕಡ್ಡಾಯವಾಗಿ ಪಾಲಿಸಿ ದೊಡ್ಡ ಗಂಡಾಂತರದಿಂದ ತಪ್ಪಿಸಿಕೊಳ್ಳಬೇಕು ಎಂದು ಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಅವರು ಮನವಿ ಮಾಡಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟುವ ನೆಟ್ಟಿನಲ್ಲಿ ಸರಕಾರ ಹೊರಡಿಸಿರುವ ಆದೇಶವನ್ನು ನಮಗಾಗಿ ನಮ್ಮ ಒಳತಿಗಾಗಿ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಂಡು ಸಂಪೂರ್ಣ ಸಾತ್ ನೀಡಬೇಕು ನಮ್ಮ ಭಾರತ ದೇಶ ಅಧ್ಯಾತ್ಮಿಕ ಸಾಂಸ್ಕೃತಿಕ ಪರಂಪರೆ ಹೊಂದಿದೆ ದೇವಸ್ಥಾನಕ್ಕೆ ಹೋಗಲು ಮನೆಯಿಂದ ಹೊರ ಬರಬೇಕಿಲ್ಲ ಮನೆಯಲ್ಲಿಯೇ ಕುಳಿತು ಸರಡಗಿ ಮಹಾಲಕ್ಷ್ಮಿ ತಾಯಿ ಪೂಜೆ ಪ್ರಾರ್ಥನೆ ಸ್ಮರಣೆ ಮಾಡಿದರೆ ಸಾಕು ಮಹಾತಾಯಿ ಕೃಪಾಶೀರ್ವಾದ ನಮ್ಮ ನಿಮ್ಮೆಲ್ಲರಿಗೂ ದಯಪಾಲಿಸಲಿದೆ ಎಂದು ಪೂಜ್ಯರ ಹೇಳಿದರು. ಆದಕಾರಣ ಎಲ್ಲಾ ಶಕ್ತಿ ಪೀಠದ ಸದ್ಭಕ್ತರು ಸಹಕರಿಸಬೇಕಾಗಿ ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.