ಆಳಂದ: ಮಹಾರಾಷ್ಟ್ರ ಕರ್ನಾಟಕದ ಗಡಿಯಾಗಿರುವ ಖಜೂರಿ ಬಾರ್ಡರ್‍ನಲ್ಲಿ ಸಿಲುಕಿರುವ ತೆಲಾಂಗಣ ಮೂಲದ 400 ಜನ ಕಾರ್ಮಿಕರಿಗೆ ಆಳಂದನ ಮಾತೃಭೂಮಿ ಸೇವಾ ಸಂಸ್ಥೆಯ ಸದಸ್ಯರು ಹಣ್ಣುಹಂಪಲುಗಳನ್ನು ನೀಡುವುದರ ಮೂಲಕ ಮಾನವೀಯ ಕಳಕಳಿ ಮೆರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೂಲಿ ಕೆಲಸಕ್ಕೆಂದು ತೆರಳಿದ್ದ ತೆಲಂಗಾಣದ ಕಾರ್ಮಿಕರು ಕೊರೋನಾ ಭೀತಿಯಿಂದ ಮಹಾರಾಷ್ಟ್ರ ಸರ್ಕಾರವು ತಮ್ಮ ಸ್ವಂತ ಸ್ಥಳಕ್ಕೆ ತೆರಳಲು ತಿಳಿಸಿದೆ. ಆದರೆ ತಮ್ಮ ಊರು ತಲುಪುವ ಮುಂಚೆಯೇ ಅವರು ಗಡಿಯಲ್ಲಿ ಸಿಲುಕಿರುವುದರಿಂದ ಮೂರು ದಿನಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಇದನ್ನು ತಿಳಿದ ಆಳಂದ ಮಾತೃಭೂಮಿ ಸೇವಾ ಸಮಿತಿಯ ಸದಸ್ಯರು ಹಣ್ಣು ಹಂಪಲುಗಳನ್ನು ತೆಗೆದುಕೊಂಡು ಅವರಿದ್ದ ಸ್ಥಳಕ್ಕೆ ಹೋಗಿ ವಿತರಣೆ ಮಾಡಿದರು.