ಸಿಮೆಂಟ್ ಕಾರ್ಖಾನೆಗಳು ಸ್ಥಳೀಯರಿಗೆ ದಿನಬಳಕೆ ವಸ್ತುಗಳು ನೀಡಬೇಕು: ಮುಕ್ರಂ ಖಾನ್

0
78

ಸೇಡಂ: ಮಹಾಮಾರಿ ಕರೋನಾ ಭೀತಿಯಿಂದ ಇಡೀ ದೇಶವೇ ತತ್ತರಿಸಿದೆ ಅನೇಕ ಬಡ ಜನರು ತಮ್ಮ ದಿನಗೂಲಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ೨೧ ದಿನ ಲಾಕ್​ಡೌನ್​ ಆಗಿದ್ದರಿಂದ ಅವರೆಲ್ಲರೂ ಒಂದು ಹೊತ್ತು ಊಟ ಹೊಟ್ಟೆಗಿಲ್ಲದೆ ಸ್ಥಳೀಯ ಬಡಜನರು ಪರದಾಡುತ್ತಿದ್ದಾರೆ ಅದಕ್ಕೆ ಸಿಮೆಂಟ್ ಕಾರ್ಖಾನೆಗಳು ಬಡ ಜನರಿಗೆ ದಿನ ಬಳಕೆ ವಸ್ತುಗಳನ್ನು ವಿತರಿಸುವ ಮೂಲಕ ನೆರವಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಒತ್ತಾಯಿಸಿದರು.

ತಾಲ್ಲೂಕಿನ ಎಲ್ಲಾ ಸಿಮೆಂಟ್ ಕಾರ್ಖಾನೆಗಳು ಸ್ಥಳೀಯ ಜನರಿಂದ ಭೂಮಿಯನ್ನು ಖರೀದಿಸಿ ಮತ್ತು ಸ್ಥಳೀಯ ಕೂಲಿ ಕಾರ್ಮಿಕರಿಂದ ಕೋಟಿ ಕೋಟಿ ರೂಪಾಯಿಗಳನ್ನು ಲಾಭ ಪಡೆಯುತ್ತಾರೆ. ಈಗ ಕೋರೊನಾ ಭೀತಿಯಿಂದ ತಾಲೂಕಿನ ಬಡ ಜನರು ಒಂದು ಹೊತ್ತಿನ ಊಟಕ್ಕೆ ನೀರಿಗೆ ಪರದಾಡುತ್ತಿದ್ದಾರೆ.

Contact Your\'s Advertisement; 9902492681

ಕಾರ್ಖಾನೆಯು ವ್ಯಾಪ್ತಿಯಲ್ಲಿ ಇರುವ ಗ್ರಾಮದ ಗಳಲ್ಲಿ ವಾಸಿಸುವ ಬಡ ಜನರು ,ಕೂಲಿ ಕಾರ್ಮಿಕರಿಗೆ ದಿನಬಳಕೆಯ ವಸ್ತುಗಳು ಸ್ಯಾನಿಟೈಸರ್ ಮಾಸ್ಕ್ ಗಳು ವಿತರಿಸಬೇಕು ಸಿಎಸ್ಆರ್ ಯೋಜನೆಯಡಿ ಯಲ್ಲಿ ಹಣವನ್ನು ಸ್ಥಳೀಯ ಅಭಿವೃದ್ದಿಗೆ ಮಿಸಲಿಡುವ ನಿಯಮ ಇದೆ. ಮತ್ತು ಸಿಮೆಂಟ್ ಕಂಪನಿಗಳು ಕನಿಷ್ಠ ೨ ಕೋಟಿ ರೂ.ಹಣವನ್ನು ಆರೋಗ್ಯ ಇಲಾಖೆಗೆ ನೀಡಬೇಕು ಎಂದು ಆಗ್ರಹಿಸಿದರು.

  • ವರದಿ: ಶಪೀಕ್ ಊಡಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here