ರಾಜ್ಯ ಸರ್ಕಾರ ಸತ್ತಿದೆಯೋ ಬದುಕಿದೆಯೋ ಎಂಬ ಭಾವನೆ ಜನರಲ್ಲಿದೆ: ಯಡಿಯೂರಪ್ಪ

0
60

ಕಲಬುರಗಿ: ರಾಜ್ಯದಲ್ಲಿ ಬರಗಾಲ ಇದೆ, ಸರ್ಕಾರ ಸತ್ತಿದೆಯೋ ಬದುಕಿದೆಯೋ ಎಂಬ ಭಾವನೆ ಜನರಲ್ಲಿದೆ. ಅವರೇ ಕಚ್ಚಾಡಿಕೊಂಡ್ರೆ ನಾವೇನು ಮಾಡೋಣ, ತಾಕತ್ ಇದ್ರೆ ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸಿ ಇಟ್ಟುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೆಲ್ಲಾದರೂ ಮುಖ್ಯಮಂತ್ರಿ ಆಗ್ತೇ‌ನೆ ಅಂತಾ ಹೇಳಿದ್ದೇನಾ? ರಾಜ್ಯದಲ್ಲಿ ಬರಗಾಲ ಇದೆ, ಕಾಂಗ್ರೆಸ್ ‌ಮುಖಂಡರು ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡೋದು ಚಾಳಿಯಾಗಿದೆ. ಪ್ರಧಾನಿ ಬಗ್ಗೆ ಮಾತನಾಡಿದ್ರೆ ದೊಡ್ಡವರಾಗ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ಕೊಟ್ಟ ಹೇಳಿಕೆ ಕೇವಲ ವಿಶ್ವನಾಥ್ ಅವರ ಹೇಳಿಕೆಯಲ್ಲ. ಕುಮಾರಸ್ವಾಮಿ ಹೇಳಬೇಕೆಂದಿದ್ದನ್ನು ವಿಶ್ವನಾಥ ಮೂಲಕ ಹೇಳಿಸಿದ್ದಾರೆ ಅಷ್ಟೇ. ಮೇ 23ರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ದಾಟಲ್ಲ ಅಂತಾ ಅವರಿಗೆ ಮನವರಿಕೆ ಆಗಿದೆ ಎಂದು ಹರಿಹಾಯ್ದ ಅವರು ಉಪಚುನಾವಣೆ ಫಲಿತಾಂಶ ಬಳಿಕ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಎಂದರು. ಚಿಂಚೋಳಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಬಹಳ ಅಂತರದಿಂದ ಗೆಲ್ತಾರೆ ಅಂತಾ ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದ್ರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here