ಅನ್ನಕ್ಕಿಂತ ಮೊದಲು ಕುಡಿಯಲು ನೀರು ಕೊಡಿ: ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ತಾಕೀತು

0
53

ಶಹಾಬಾದ: ಕರೋನಾ ವೈರಸ್ ಹರಡುತ್ತಿರುವದರಿಂದ ದೇಶದ್ಯಾದಂತ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ರಾಮಘಡ ಆಶ್ರಯ ಕಾಲೋನಿಯಲ್ಲಿರುವ ಕೈಗೆ ದುಡಿಮೆ ಇಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಪರಿತಪಿಸುತ್ತಿರುವ ಬಡ ಜನರಿಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅನ್ನದ ಪೊಟ್ಟಣ ವಿತರಿsಸಲು ಬಂದಾಗ, ಅಲ್ಲಿನ ಜನರು ನಮಗೆ ಅನ್ನಕ್ಕಿಂತ ಮೊದಲು ನೀರು ಕೊಡಿ ಸಾಹೇಬ್ರೆ ಎಂದು ಅಳಲು ತೋಡಿಕೊಂಡ ಘಟನೆ ನಡೆದಿದೆ.

ರಾಮಘಡ ಆಶ್ರಯ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನೀರಿಗಾಗಿ ಪರದಾಡುವ ಪ್ರಸಂಗ ಎದುರಾಗಿದೆ. ಆಶ್ರಯ ಕಾಲೋನಿಯಿಂದ ಬೇರೆ ಬಡಾವಣೆಗೆ ನೀರು ತರಲು ಹೋದರೆ ಅಲ್ಲಿಂದ ಪೊಲೀಸರು ಓಡಿಸುತ್ತಾರೆ. ಅನ್ನವನ್ನು ಬೇಡಿಯಾದರೂ ತಿನ್ನಬಹುದು. ಕುಡಿಯುವ ನೀರಿಲ್ಲದೇ ಹೇಗೆ ಬದುಕಬೇಕು ಎಂದು ಶಾಸಕರ ಮುಂದೆ ಅಲವತ್ತುಕೊಂಡರು.

Contact Your\'s Advertisement; 9902492681

ತಕ್ಷಣವೇ ಶಾಸಕರು, ಒಂದೆರಡು ದಿನದಲ್ಲಿ ಪೈಪ್ ಲೈನ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನಗರ ಸಭೆ ಪೌರಾಯುಕ್ತರಿಗೆ ತಾಕೀತು ಮಾಡಿದರು. ಪೈಪ್ ಲೈನ್ ಮಾಡಲು ಸಮಯಾವಕಾಶ ಬೇಕಾಗುತ್ತದೆ. ಅದಕ್ಕಿಂತ ಮುಂಚೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡವುದಾಗಿ ಪೌರಾಯುಕ್ತರು ಹೇಳಿದರು. ನಂತರ ರಾಮಘಡ, ಮರಗೋಳ ಮಹಾವಿದ್ಯಾಲಯದ ಬಳಿ ಇರುವ ಆಶ್ರಮ ಮನೆಯ ಬಡ ನಿವಾಸಿಗಳಿಗೆ ಅನ್ನದ ಪೊಟ್ಟಣ ವಿತರಿಸಿದರು.

ಶಾಸಕರೊಂದಿಗೆ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ, ಅಣ್ಣಪ್ಪ ದಸ್ತಾಪುರ ಕನದಪ್ಪ ದಂಡಗುಲಕರ್, ಸುಭಾಷ ಜಾಪೂರ, ಸದಾನಂದ ಕುಂಬಾರ, ಪಾರ್ವತಿ ಪವಾರ ಪಿಐ ಅಮರೇಶ.ಬಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here