ಯಾದಗಿರಿ: ಮಹಾಮಾರಿ ನೋವಿಲ್ ಕೊರೋನಾ ವೈರಸ್ ದೇಶದ್ಯಂತ ವ್ಯಾಪಿಸುತ್ತಿದ್ದು, ಮಹಾಮರಿ ತಡೆಗಟ್ಟಲು ವಿಜ್ಞಾನಿಗಳು ಮತ್ತು ವೈದ್ಯಲೋಕ ಸಾಕಷ್ಟು ಶ್ರಮ ಪಟ್ಟುತಿದ್ದಾರೆ. ಅದೇ ರೀತಿಯಲ್ಲಿ ಬಹು ಸಂಸ್ಕೃತಿ ಉಳ ಭಾರತದಲ್ಲಿ ತಮ್ಮ ನಂಬಿಕೆಗೆ ತಕ್ಕಂತೆ ಪ್ರಯತ್ನ ನಡೆಸುತ್ತಿದ್ದಾರೆ.
ಸುರಪುರ ತಾಲ್ಲೂಕಿನ ದೇವರ ಗೂನಾಲದಲ್ಲಿ ಕೊರೋನಾ ವೈರಿಸ್ ಭಯದಿಂದ ದೇವರ ಮೊರೆ ಹೋದ ಸನ್ನಿವೇಶ ದೇವರ ಗೂನಾಲದಲ್ಲಿ ಇಂದು ಬೆಳಿಗ್ಗೆ 6.ಗಂಟೆಗೆ ನಡೆದಿದೆ.
ಗ್ರಾಮದ ನವಬಾಲಕರಿಂದ ಊರಿನ ಎಲ್ಲಾ ದೇವಸ್ಥಾನಗಳಲ್ಲಿ ಗಂಗಾ ಪೂಜೆ ನೆರವೇರಿಸಿ, ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು.ನಂತರ ಊರಿನ ಎಲ್ಲಾ ಮನೆಗಳಿಗೆ ಪ್ರಸಾದ ಹಂಚಿ ಕೊರೋನಾ ತಡೆಗೆ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ದೆವಿಂದಪ್ಪ ಚಿಕ್ಕನಳ್ಳಿ ಮಾತಾನಾಡಿ, ಆನಾದಿ ಕಾಲದಿಂದಲೂ ಗ್ರಾಮದಲ್ಲಿ ಯಾವುದೇ ರೋಗ, ರುಜಿನಿ ಗ್ರಾಮಕ್ಕೆ ಮತ್ತು ನಾಡಿನ ಜನತೆಗೆ ಬರಬಾರದೆಂದು ಗ್ರಾಮದ ಹಿರಿಯರು ಹಾಗಾಗ ಇಂತಹ ಕಾರ್ಯಕ್ರಮ ಮಾಡುತ್ತಿದ್ದರು. ಈಗ ಕೊರೋನಾ ಮಹಾಮರಾರಿ ವಿಶ್ವ ಮತ್ತು ದೇಶವನ್ನು ಕಾಡುತ್ತಿದ್ದು ಹಿರಿಯರು ತೊರಿಸದ ದಾರಿಯಲ್ಲಿ ಅದನ್ನು ಮುಂದುವರಿಸಿತಿದ್ದೆವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವೆಂಕಟೇಶ್ ಎಚ್ ಬೇಟೆಗಾರ ಶಿವು ಮಾನಯ್ಯ ಮತ್ತು ದೆವಿಂದಪ್ಪ ಗೌಡ ದೆವಣ್ಣ ಕಟ್ಟೀಮನಿ ದೆವಿಂದಪ್ಪ ದೂರೆ ಸಕ್ರಪ್ಪ ಬಾಗಲಿ ಬಸಣ್ಣ ಗೌಡ ಬಲಭಿಮ ದಳವಾಯಿ ಬಿಮ್ಮಣ ಪೈಲ್ವಾನ ದೆವಿಂದಪ್ಪ ಮಹಾಂತಗೌಡ ಪರಮಣ್ಣ ಹುಜರತ್ತಿ ನಾಗಪ್ಪ ಚಿಕನಳ್ಳಿ ಇತರರು ಇದ್ದರು.