ಕಲಬುರಗಿ: ಆಳಂದ ತಾಲ್ಲೂಕಿನ ಲಾಡ್ ಚಿಂಚೋಳಿಯಲ್ಲಿ ಲಾಕ್ ಡೌನ್ ಹಿನ್ನೆಯಲ್ಲಿ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲಾಗದೆ ಮನನೊಂದು ಸ್ವಂತ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಲಾಡ್ ಚಿಂಚೋಳಿ ಗ್ರಾಮದ ಚಂದ್ರಕಾಂತ ಬಿರಾದಾರ್ (46) ಆತ್ಮಹತ್ಯೆಗೆ ಶರಣಾದ ರೈತ, ತನ್ನ 3 ಎಕರೆ ಜಮಿನನಲ್ಲಿ ಕಲ್ಲಂಗಡಿ ಬೆಳೆದಿದ್ದು, ದೇಶದಲ್ಲಿ ಲಾಕ್ ಡೌನ್ ಘೋಷಣೆಯಿಂದ ಬೆಳದ ಕಲ್ಲಂಡಿ ಮಾರುಕಟ್ಟೆ ಸಾಗಾಣಿಕೆ ಮಾಡಕಾಗದೆ ಮನನೊಂದು ಜಮೀನಿನಲ್ಲಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮೃತ ರೈತನ ಮನೆಗೆ ಕೃಷಿ ಅಧಿಕಾರಿ ಹಾಗೂ ತಹಸೀಲ್ದಾರ ಜೊತೆಗುಡಿ ಆಳಂದ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ವ್ಯಕ್ತಪಡಿದರು. ಮೃತ ಕುಟುಂಬಕ್ಕೆ ಸರಕಾರದಿಂದ ಐದು ಲಕ್ಷ ರೂ. ಪರಿಹಾರ ಕುಡಿಸುವುದಾಗಿ ಭರವಸೆ ನೀಡಿದರು.
ಈ ಕುರಿತು ತೋಟಗಾರಿಕೆ ಸಚಿವ ಮಾತನಾಡಿ ಮೃತ ಕುಟುಂಬಕ್ಕೆ ಪರಿಹಾರ ಘೋಷಣೆಯ ಆಶ್ವಾಸನೆ ನೀಡಿ, ರೈತರು ನೇರವಾಗಿ ಹಾಫ್ ಕಾಮ್ಸ್ ಮೂಲಕ ಮಾರುಕಟ್ಟೆಗೆ ಸರಬಾರಜು ಮಾಡಬೇಕೆಂದು ತಿಳಿಸಿದ್ದಾರೆ.
ಮೃತ ರೈತ ಮೂವರು ಸಹೋದರರಿದ್ದು, ಬೇರೆ ವ್ಯಾಪಾರ ತೊಡಗಿದ್ದ ಮೃತ ರೈತ ಇತ್ತೀಚಿಗೆ ಸಾಲ ಮಾಡಿ ಕಲ್ಲಂಗಡಿ ಬೆಳೆದು ಮಾರುಕಟ್ಟೆಯಲ್ಲಿ ಸಾಗಿಸುವ ವ್ಯಾಪರದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.