ಕಲಬುರಗಿಯ ವಿಧಾನಸೌಧದಲ್ಲಿ ಇಂದು ಜಿಲ್ಲಾಧಿಕಾರಿ ಶರತ್ ಬಿ ಅವರಿಗೆ ಕಲಬುರಗಿ ಬಣಗಾರ ಸಮಾಜದ ಮುಖಂಡರಾದ ಕಮರಡಗಿ ಕುಟುಂಬದವರು ಕೊರೊನಾ ವೈರಸ್ ತಡೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ೧,೫೦,೦೦೦ (ಒಂದು ಲಕ್ಷ ಐವತ್ತು ಸಾವಿರ) ರೂ.ಗಳ ಚೆಕ್ಕನ್ನು ನೀಡಿದರು. ಈ ಸಂದರ್ಭದಲ್ಲಿ ಬಸವರಾಜ್ ಕಮರಡಗಿ, ವಿಜಯಕುಮಾರ್ ಕಮರಡಗಿ, ಬಣಗಾರ ಸಮಾಜದ ಅಧ್ಯಕ್ಷ ಅಶೋಕ ದೊಡ್ಡಮನಿ, ಡಾ.ರವೀಂದ್ರ ನಾಗಲೀಕರ್, ಆನಂದ ದಂಡೋತಿ ಇದ್ದರು.