ರೀಪಬ್ಲಿಕನ್ ಯೂತ್ ಫೆಡ್ರೇಷನ್ ವತಿಯಿಂದ ನಿರ್ಗತಿಕರಿಗೆ ದವಸ, ಧಾನ್ಯಗಳ ಬ್ಯಾಗ್ ವಿತರಣೆ

0
50

ಕಲಬುರಗಿ: ಮಾ-೩೧, ಮಹಾಮಾರಿ ಕಿಲ್ಲರ್ ಕೊರೋನಾ ಆತಂಕದ ಮಧ್ಯೆಯೂ ಕೆಲ ಸಂಘ-ಸಂಸ್ಥೆಗಳು ಕೂಲಿ ಕಾರ್ಮಿಕರು, ಭಿಕ್ಷುಕರು. ನಿರ್ಗತಿಕರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆಯುತ್ತಿವೆ. ಅದರಲ್ಲೂ ಸದಾ ಸಮಾಜಮುಖಿಯಗಿ ಕೆಲಸ ಮಾಡಿಕೊಂಡು ಬರುತ್ತಿರುವ ಹಣಮಂತ ಇಟಗಿ ಅವರ ನೇತೃತ್ವದ ರೀಪಬ್ಲಿಕನ್ ಯೂತ್ ಫೆಡ್ರೇಷನ್ ಸಂಘಟನೆಯ ಸದಸ್ಯರೆಲ್ಲರು ಸೇರಿಕೊಂಡು ಮಂಗಳವಾರ ಪಂಚಶೀಲ ನಗರ, ಕಾಂತಾ ಕಾಲೋನಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿರುವ ಕೊಳೆಗೇರಿಗಳಿಗೆ ಗುಡಿಸಲುಗಳಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರು, ನಿರ್ಗತಿಕರ ಮನೆ ಬಾಗಿಲಿಗೆ ತೆರಳಿ ಆಹಾರ ಧಾನ್ಯಗಳನ್ನು ವಿತರಿಸಿದರು.

೨೫ ಕೆಜಿ ಅಕ್ಕಿ, ಎರಡು ಒಳ್ಳೆಣ್ಣೆ ಪ್ಯಾಕೇಟ್, ರವೆ, ಗೋಧಿ ಹಿಟ್ಟು, ಅವಲಕ್ಕಿ, ಬಾಳೆಹಣ್ಣು, ಜೀರಗಿ, ಪೇಸ್ಟ್, ಮ್ಯಾಚ್ ಬಾP ಸೇರಿ ಪ್ರತಿಯೊಂದು ಕುಟುಂಬಕ್ಕೂ ತಿಂಗಳ ಕಾಲ ಆಗುವಷ್ಟು ಸಾಮಗ್ರಿಗಳನ್ನು ಅಗತ್ಯ ವಸ್ತುಗಳಿರುವ ಬ್ಯಾಗ್‌ಗಳನ್ನು ನೀಡಿದರು. ಒಂದೊಂದು ಕುಟುಂಬಕ್ಕೆ ಬೇಕಾದ ವಸ್ತುಗಳನ್ನು ಸ್ಲಂ ಪ್ರದೇಶದ ಕುಟುಂಬಗಳಿಗೆ ಆಹಾರ ಧಾನ್ಯವನ್ನು ವಿತರಿಸಿದರು.

Contact Your\'s Advertisement; 9902492681

ರಮೇಶ ಪಟ್ಟೆದಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹಾಗು ನ್ಯಾಯವಾದಿ ಸಂಘರಾಜ ವಾಲಿಕರ್ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಚಾಲಕ ಹನುಮಂತ ಇಟಗಿ, ಕಾರ್ಯಾಧ್ಯಕ್ಷ ಸಂತೋಷ ಮೇಲ್ಮನಿ, ನಾಗೇಂದ್ರ ಜವಳಿ, ಬಾಲಾಜಿ ಚಿತ್ತೇಕರ್, ಡಾ.ಅನೀಲ್ ಟೆಂಗಳಿ, ಅನೀಲ್ ದೇವರಮನಿ, ಅಂಬರೀಶ್ ಅಂಬಲಗಿ, ನಗರಾಧ್ಯಕ್ಷ ಶೀವಕುಮಾರ ಜಾಲವಾದ, ರಾಣು ಮುದ್ದನಕರ್, ವಿಘ್ನೇಶ್ವರ ಟೈಗರ್, ಶಶಿ ಆಲೂರ್ಕರ್, ಅರುಣಕುಮಾರ ಗಡ್ಡದ, ವಿದ್ಯಾಸಾಗರ ಬಬಲಾದಕರ್, ಚಿದಾನಂದ ಕುಡ್ಡನ್, ಸಿದ್ಧಾರ್ಥ ಪಾರೆ, ರಮೇಶ ಹಾಗರಗಿ, ಮಹೇಶ ನವಲಗಿರಿ, ಮಯೂರ್ ವಾಘಮೋರೆ, ರುಕ್ಕೆಶ್ ಬಚ್ಚನ್, ಅನೀಲ ಸಾಜರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ದೇಶಕ್ಕೆ ವಕ್ಕರಿಸಿದ ಮಹಾಮಾರಿಯಿಂದಾಗಿ ದೇಶದೆಲ್ಲೆಡೆ ಬಡವರ ಸ್ಥಿತಿ ತುತ್ತು ಅನ್ನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಸಮಾಜಿಕ ನೆಲಗಟ್ಟಿನ ಮೇಲೆ ಸಮಾಜಿಕ ಅಸಮತೋಲನದ ವಿರುದ್ಧ ಹುಟ್ಟಿಕೊಂಡಂತಹ ಸಾಮಾಜಿಕ ಹೋರಾಟದ ಯುವಕರ ಸ್ವಾಭಿಮಾನಿ ತಂಡವೊಂದು Republican Youth Federationನ ಹೆಸರಿನ ಮೇಲೆ ಹತ್ತು ಹಲವು ಹೋರಾಟದ ಹಾದಿಯಲ್ಲಿ ಇಂದು ಬಡವರ ಹಸಿವಿನ ಹೋರಾಟದಲ್ಲಿ ಬಡವರ ಜೊತೆ ನಿಂತಿದೆ ನಿರಂತರ ನಡೆಯುವ ಹಸಿವಿನ ಹೋರಾಟದಲ್ಲಿ ನಮ್ಮ ತಂಡ ಅವರ ಜೊತೆ ನಿಲ್ಲಲ್ಲಿದೆ ಆ ಒಂದು ಹೋರಾಟದ ಭಾಗವಾಗಿ ಇಂದು ಬೆಳಗ್ಗೆ ೧೧ ಗಂಟೆಗೆ ಕಲಬುರಗಿಯ ಪಂಚಶೀಲ ನಗರದಲ್ಲಿ ಕಡು ಬಡ ಕುರುಡು ಅಹ್ಮದ್ ಬಿ ಕುಟುಂಬಕ್ಕೆ ಅನುಶಿಯಾ ಬಾಯಿ ಕುಟುಂಬಕ್ಕೆ ಸಂಘಟನೆ ವತಿಯಿಂದ ಬೇಳೆ, ೫ಞg ಗೋಧಿ ಹಿಟ್ಟು, ೧ ಪಾಕಿಟ್ ಎಣ್ಣೆ, ತರಕಾರಿ, ಉಳ್ಳಾಗಡ್ಡೆ, ಬಾಳೆಹಣ್ಣುಗಳನ್ನು ವಿತರಣೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here