ಲಾಕ್‌ಡೌನ್ ಕೇರ್ ಮಾಡದೆ ಬೈಕ್ ಓಡಿಸುವವರಿಗೆ ಬುದ್ಧಿ ಹೇಳುವುದ್ಯಾರು

0
108

ಸುರಪುರ: ಈಗಾಗಲೆ ಕೊರೊನಾ ಮಹಾಮಾರಿ ಜಗತ್ತನ್ನೆ ನಡುಗಿಸಿದೆ,ಭಾರತದಲ್ಲಿ ಇದರ ಭಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಅಲ್ಲದೆ ಕರ್ನಾಟಕದಲ್ಲಿಯು ಸೊಂಕಿತರ ಸಂಖ್ಯೆ ದಿನಾಲು ಏರುತ್ತಿದೆ.ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭಾರತ ಲಾಕ್‌ಡೌನ್ ಹೆಸರಲ್ಲಿ ಜನರು ಮನೆಯಿಂದ ಹೊರಗೆ ಸುಖಾ ಸುಮ್ಮನೆ ಬರದಂತೆ ಅದೇಶ ಹೊರಡಿಸಿದೆ.ಆದರೆ ತಾಲೂಕಿನ ಜನತೆ ಮಾತ್ರ ಸರಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಮನೆಯಿಂದ ಹೊರಗೆ ಓಡಾಡುತ್ತಿದ್ದಾರೆ.

ಸರಕಾರ ತನ್ನ ಆದೇಶದಲ್ಲಿ ಕೇವಲ ಅಗತ್ಯ ವಸ್ತುಗಳಿಗಾಗಿ ಮಾತ್ರ ಒಬ್ಬರು ಹೊರಗಡೆ ಬಂದು ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದೆ.ಇದನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಪೊಲೀಸ್ ಇಲಾಖೆ ನಗರಸಭೆ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲವೊಮ್ಮೆ ಪೊಲೀಸರು ಲಾಠಿ ಹಿಡಿದು ಸುಮ್ಮನೆ ಹೊರಗಡೆ ಬರುವವರನ್ನು ಚದುರಿಸುತ್ತಾರೆ.ಇದರ ವಿರುದ್ಧ ಜನರು ಮಾತನಾಡುವುದು ಇದೆ.ಆದರೆ ಈಗಾಗಲೆ ವಿದೇಶದಿಂದ ತಾಲೂಕಿಗೆ ೨೨ ಜನ ಬಂದಿದ್ದರು ಆದರೆ ಯಾರಲ್ಲೂ ಪಾಸಿಟಿವ್ ಕಾಣಿಸದಿರುವುದು ಅದೃಷ್ಟ ಎನ್ನಬಹುದು.

Contact Your\'s Advertisement; 9902492681

ಇನ್ನು ೧೩ ಸಾವಿರಕ್ಕೂ ಹೆಚ್ಚು ಜನ ತಾಲೂಕಿನ ವಿವಿಧ ಗ್ರಾಮಗಳಿಗೆ ಹೊರ ರಾಜ್ಯಗಳಿಗೆ ಗುಳೆ ಹೋಗಿ ಬಂದಿದ್ಧಾರೆ.ಅವರಲ್ಲಿ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದರೆ ಜನರ ಕತೆ ಮುಗಿದಂತೆ ಎಂದು ಆರೋಗ್ಯ ಇಲಾಖೆ ಹಗಲಿರಳು ಜನರನ್ನು ಪರೀಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಆದರೆ ಬೈಕ್ ಸವಾರರು ಇದ್ಯಾವುದರ ಪರಿವೆ ಇಲ್ಲದೆ ಓಡಾಡುತ್ತಿದ್ದಾರೆ.ಹಾಗೊಮ್ಮೆ ಯಾರಲ್ಲಾದರೂ ಕೊರೊನಾ ಸೊಂಕು ಬಂದು ತಗುಲಿದರೆ ಜನರು ದೊಡ್ಡ ಮಟ್ಟದಲ್ಲಿ ಸಂಕಷ್ಟ ಹೆದರಿಸಬೇಕಾಗಲಿದೆ.ಇದನ್ನು ಸುಮ್ಮನೆ ಮನೆಯಿಂದ ಹೊರಗಡೆ ಬರುವವರು ಅರ್ಥೈಸಿಕೊಳ್ಳಬೇಕಿದೆ.

ಶಾಸಕ ನರಸಿಂಹ ನಾಯಕ (ರಾಜುಗೌಡ)ರು ಕೂಡ ಅನೇಕಬಾರಿ ಮನವಿ ಮಾಡಿ ಜನತೆ ಸುಮ್ಮನೆ ಮನೆಯಿಂದ ಹೊರಗಡೆ ಬರದಂತೆ ಮನವಿ ಮಾಡಿದ್ದಾರೆ.ಇದ್ಯಾವುದಕ್ಕೂ ಕ್ಯಾರೆ ಎನ್ನದ ಜನರಿಗೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಮಡು ನಿಯಂತ್ರಣಕ್ಕೆ ತರುವ ಅವಶ್ಯವಿದೆ ಎಂದು ಅನೇಕ ಜನ ಪ್ರಜ್ಞಾವಂತರು ಆಗ್ರಹಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here