ಕಲಬುರಗಿ: ನೂತನ ಡಿಇಜಿಪಿಯಾಗಿ ಐಪಿಎಸ್ ಎನ್. ಸತೀಶ್ ಕುಮಾರ್ ನೇಮಕ

0
94

ಕಲಬುರಗಿ: ಬೆಂಗಳೂರು ಕೆಎಸ್‌ಆರ್‌ಪಿಯ ಡಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಗಿರುವ ಐಪಿಎಸ್ ಎನ್. ಸತೀಶ್ ಕುಮಾರ್ ಅವರನ್ನು ಕಲಬುರಗಿ ಡಿಇಜಿಪಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ ಹುದ್ದೆಯಲ್ಲಿ ಹುದ್ದೆಯಲ್ಲಿ ಓಓಡಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಕೆಎಸ್ ಆರ್ ಪಿ, ಬೆಂಗಳೂರು ರವರು ಎನ್, ಸತೀಶ್ ಕುಮಾರ್, ಐಪಿಎಸ್, ಡಿಐಜಿಪಿ ರವರನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಿಂದ ಬಿಡುಗಡೆಗೊಳಿಸಿ ಪ್ರಸ್ತುತ ನೇಮಕ ಮಾಡಿರುವ ಹುದ್ದೆಗೆ ಕರ್ತವ್ಯ ನಿರ್ವಹಿಸಲು ಆದೇಶಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here