ಸುರಪುರ: ಕೊರೊನಾ ನಿರ್ಮೂಲನೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ನಗರಸಭೆ, ಅಗ್ನಿಶಾಮಕ, ಎಪಿಎಂಸಿ ಹೀಗೆ ಅನೇಕ ಇಲಾಖೆಗಳ ಶ್ರಮಕ್ಕೆ ಗೌರವಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮತ್ತು ಬಣಜಿಗರ ಕ್ಷೇಮಾಭಿವೃಧ್ಧಿ ಸಂಘದಿಂದ ಆಹಾರ ಮತ್ತು ನೀರು ವಿತರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಇಂದು ಕೊರೊನಾ ಎಂಬುದು ಸಾವಿನ ಕೂಪವಾಗಿದೆ.ಇದರ ಸೊಂಕು ತಗುಲಿದರೆ ಬದುಕುವ ಸಾಧ್ಯತೆಯೆ ಕಡಿಮೆ ಎನ್ನುವಷ್ಟು ಭಯಂಕರವಗಿದೆ.ಇಂತಹ ಸಾವಿನ ಸೊಂಕಿನ ನಿರ್ಮೂಲನೆಗೆ ಹಗಲಿರಳು ಕೆಲಸ ಮಾಡುತ್ತಿರುವ ಅನೇಕ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯ ಶ್ಲಾಘನಿಯವಾದುದು ಎಂದರು.
ನಮ್ಮ ಸಂಘಟನೆಗಳಿಂದ ಇರುವ ಈ ಎಲ್ಲಾ ಇಲಾಖೆಗಳ ಕರ್ತವ್ಯನಿರತರಿಗೆ ಆಹಾರ ಮತ್ತು ನೀರು ವಿತರಿಸುವ ಮೂಲಕ ಅವರ ಸೇವೆಗೆ ಗೌರವಿಸಲು ಮುಂದಾಗಿದ್ದೇವೆ.ಇಂದು ಸುರಪುರ ತಾಲೂಕು,ನಾಳೆ ಶಹಾಪುರ,ಯಾದಗಿರಿ,ಹುಣಸಗಿ,ವಡಗೇರಿ ಹಾಗು ಗುರುಮಿಠಕಲ್ ತಾಲೂಕುಗಳಿಗೆ ತೆರಳಿ ಆಹಾರ ನೀರು ವಿತರಿಸುವುದಾಗಿ ತಿಳಿಸಿದರು.
ರೈತ ಸಂಘದ ರಾಜ್ಯ ವಿಭಾಗೀಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ,ಮುಖಂಡ ಸೂಗುರೇಶ ವಾರದ್,ದೇವಿಂದ್ರಪ್ಪಗೌಡ ಮಾಲಗತ್ತಿ,ಬಣಜಿಗರ ಸಂಘದ ತಾಲೂಕು ಅಧ್ಯಕ್ಷ ಅಂಬ್ರೇಶ ದೇಸಾಯಿ,ಶಿವಣಗೌಡ ಸೂಗುರು,ನಾಗಭೂಷಣ ಯಾಳಗಿ,ಜಗದೀಶ ತಂಬಾಕೆ,ಶರಣಬಸವ ಅರಕೇರಿ,ಬಸವರಾಜಪ್ಪಗೌಡ ಹೆಮ್ಮಡಗಿ,ಮಲ್ಕಣ್ಣ ಚಿಂತಿ ಸೇರಿದಂತೆ ಅನೇಕರಿದ್ದರು.