ಕೊರೋನ ವೈರಸ್ ತಡೆಗೆ ಅಗತ್ಯ‌ಕ್ರಮ ತೆಗೆದುಕೊಳ್ಳಿ: ಶಾಸಕ ಪ್ರಿಯಾಂಕ್ ಖರ್ಗೆ ಸೂಚನೆ

0
145

ಚಿತ್ತಾಪುರ: ಕೊರೋನಾ ವೈರಸ್ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿ ವ್ಯಾಪಿಸುತ್ತಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಸ್ವಲ್ಪ ಕಟ್ಟಪಟ್ಟು ಕೆಲಸ ಮಾಡಿ ಜನರಿಗೆ ಅರಿವು ಮೂಡಿಸಿದರೆ ಖಂಡಿತಾ ನಿಯಂತ್ರಣಕ್ಕೆ ತರಬಹುದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಅವರು ಚಿತ್ತಾಪುರ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಾಲೂಕಿನಲ್ಲಿ ಇದುವರೆಗೆ ಅಭಿವೃದ್ದಿ ಕಾರ್ಯಗಳಿಗೆ ಸಂಪೂರ್ಣ ಒತ್ತು ನೀಡಿ, ರಸ್ತೆ, ಚರಂಡಿ, ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದೇವೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದ್ದು ಅಭಿವೃದ್ದಿ ಕಾರ್ಯಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿ ನಮ್ಮ ಸಂಪೂರ್ಣ ಗಮನ ಕೊರೋನಾ ವೈರಸ್ ತಡೆಗಟ್ಟುವುದಕ್ಕೆ ಕೊಡಬೇಕಾಗಿದೆ.

Contact Your\'s Advertisement; 9902492681

ಹೊರ ರಾಜ್ಯದಿಂದ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಗಳಿಂದ ವಲಸೆ ಹೋದವರು ವಾಪಸ್ ಬಂದಿದ್ದು ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಬೇಕು ಜೊತೆಗೆ ಪ್ರಮಖವಾಗಿ ಸರಕಾರದ ಪ್ರೊಟೋಕಾಲನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಹೋಮ್ ಕ್ವಾರೆಂಟನ್ ಸೇರಿದಂತೆ ತೆಗೆದುಕೊಳ್ಳಬೇಕಾಗಿರುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಿದ್ದು, ತಹಸೀಲ್ದಾರ, ತಾಲೂಕು ಪಂಚಾಯತ ಇಓ, ಹಾಗೂ ಪೊಲೀಸ್ ಇಲಾಖೆ ಪರಸ್ಪರ ಸಹಕಾರದೊಂದಿಗೆ ಕಾರ್ಯ‌ನಿರ್ವಹಿಸಬೇಕು ಎಂದರು.

ಕೊರೋನಾ ವೈರಸ್ ಯಾವುದೇ ಧರ್ಮ, ಜಾತಿ ಅಥವಾ ಬಡವ ಶ್ರೀಮಂತ ಎನ್ನುವ ತಾರತಮ್ಯವಿಲ್ಲದೇ ಎಲ್ಲರಿಗೂ ವ್ಯಾಪಿಸುತ್ತಿರುವುದು ಆತಂಕಕ್ಕೆಡೆಮಾಡಿದೆ ಎಂದ ಶಾಸಕರು, ನಿಜಾಮುದ್ದೀನ್ ಧಾರ್ಮಿಕ ಸಭೆಯ ನಂತರ ಕೊರೋನಾ ವ್ಯಾಪಿಸುತ್ತಿದೆ ಎಂಬರ್ಥದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, ವೈರಸ್ ಯಾವುದೇ ಧರ್ಮ, ಜಾತಿ ನೋಡಿಕೊಂಡು ಬರುವುದಿಲ್ಲ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜೊತೆಗೆ ಜನರಿಗೆ ಕೊರೋನಾ ಸೋಂಕಿನ ಅಗತ್ಯ ತಿಳುವಳಿಕೆ ಮೂಡಿಸಬೇಕು ಎಂದು ಸಭೆಯಲ್ಲಿ ಹಾಜಿರಿದ್ದ ಚಿತ್ತಾಪುರ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರಿಗೆ ಸೂಚಿಸಿದರು.

ತಾಲೂಕು ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿ, ತಾಲೂಕಿನ ಸುತ್ತ ಮುತ್ತ ಅಥವಾ ಗ್ರಾಮಗಳಲಿ ಏನು ನಡೆಯುತ್ತಿದೆ ಎನ್ನುವುದನ್ನು ಕೂಡಾ ಸೂಕ್ಷ್ಮವಾಗಿ ಗಮನಿಸಿ ಚಿತ್ತಾಪುರ ತಾಲೂಕಿನಲ್ಲಿ ಸೋಂಕು ಹಬ್ಬದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾದರಿ ಹಾಗೂ ಸೋಂಕು ಮುಕ್ತ ತಾಲೂಕನ್ನಾಗಿ ಮಾಡಬೇಕು,

ವೈದ್ಯಕೀಯ ರಂಗದಲ್ಲಿ ಮುಂದುವರೆದ ರಾಷ್ಟ್ರಗಳಾದ ಅಮೇರಿಕಾ, ಇಟಲಿ, ಸ್ಪೇನ್ ನಂತ ದೇಶಗಳು ಕೊರೋನಾ ವೈರಸ್ ತಂದೊಡ್ಡಿದ ಗಂಡಾಂತರದಿಂದ ತತ್ತರಿಸಿ ಹೋಗಿವೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಕರ್ನಾಟಕದಷ್ಟೆ ಜನಸಂಖ್ಯೆ ಹೊಂದಿರುವ ಇಟಲಿ ದೇಶ ಕೊರೋನಾ ಸೋಂಕಿನಿಂದ ಅಪಾರ ಪ್ರಮಾಣ ಪ್ರಾಣ ಹಾನಿ ಅನುಭವಿಸಿದೆ.‌ ಹಾಗಾಗಿ, ಕೊರೋನ ವೈರಸ್ ನ ಮಾರಕತೆ ಹಾಗೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಧಿಕಾರಿಗಳು ಕನಿಷ್ಟ ನಾಲ್ಕರಿಂದ ಅರುವಾರಗಳ ಕಾಲ ಕೆಲಸ ಮಾಡಿದರೆ ಸೋಂಕ ಹರಡದಂತೆ ತಡೆಗಟ್ಟಬಹುದು ವಿಶೇಷವಾಗಿ ತಾಲೂಕು ಪಂಚಾಯತ ಇಓ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದ ಶಾಸಕರು ತಹಸೀಲ್ದಾರ್ ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಹೊಂದಿ ಕೊರೋನಾ ವೈರಸ್ ತಡೆಗಟ್ಟಲು ಬೇಕಾಗುವ ಎಲ್ಲ ಅಗತ್ಯ ಕ್ರಮಗಳು, ಜನರಿಗೆ ಅರಿವು ಮೂಡಿಸುವಂತ ಪ್ರಚಾರಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು.

ಈ ವೇಳೆಯಲ್ಲಿ ಹಸೀಲ್ದಾರ್ ಉಮಾಕಾಂತ್ ಹಳ್ಳೆ, ರವೀಂದ್ರ ದಾಮ, ತಾಲೂಕ ಪಂಚಾಯತ್ ಇಓ ಅನಿತಾ ಪೂಜಾರಿ, ಆರೋಗ್ಯ ಅಧಿಕಾರಿ ಸುರೇಶ್ ಮೇಕಿನ್, ಪಶುವೈದ್ಯಾಧಿಕಾರಿ ಬಸಲಿಂಗಪ್ಪ ಡಿಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶಂಕ್ರಮ್ಮ ಢವಳಗಿ, ಪುರಸಭೆ ಅಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಸಿಡಿಪಿಒ ರಾಜಕುಮಾರ್, ತೋಟಗಾರಿಕೆ ಅಧಿಕಾರಿ ಸಿದ್ರಾಮ, ಡಿವೈಎಸ್ಪಿ ವೆಂಕನಗೌಡ ಪಾಟೀಲ್, ಸಿಪಿಐ ಪಂಚಾಕ್ಷರಿ ಸಾಲಿಮಠ್, ಸೇರಿದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here